ಬೆಂಗಳೂರು: ಇಂದು ವರನಟ ಡಾ.ರಾಜ್‍ಕುಮಾರ್ ಅವರ 89ನೇ ಜನುಮದಿನ. ಇಡೀ ಸ್ಯಾಂಡಲ್‍ವುಡ್ ಮತ್ತು ಕನ್ನಡ ನಾಡು ಮೆಚ್ಚಿದ ಅಪೂರ್ವ ಕಲಾವಿದ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.ಪ್ರತಿ ವರ್ಷದಂತೆ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‍ಕುಮಾರ್ ಸಮಾಧಿ ಬಳಿ ಕುಟುಂಬಸ್ಥರು ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ರಾಜ್ ಹಾಡುಗಳ ಗಾನಲಹರಿ ಮುಂತಾದ ಕಾರ್ಯಕ್ರಮಗಳಿರುತ್ತವೆ.ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ “ರಾಜಕುಮಾರ” ಚಿತ್ರತಂಡದಿಂದ ಅಭಿಮಾನಿ ದೇವರುಗಳಿಗಾಗಿ ವಿಶೇಷ ಆಫರ್ ನೀಡಲಾಗಿದೆ. ಸಿನಿಮಾದ ಟಿಕೆಟ್ ದರವನ್ನ ಶೇ.50 ರಷ್ಟು ಇಳಿಸಲಾಗಿದೆ. ಗೂಗಲ್ ಸಂಸ್ಥೆಯೂ ಸಹ ತನ್ನ ಮುಖಪುಟದಲ್ಲಿ ಡಾ.ರಾಜ್ ಅವರ ಚಿತ್ರವನ್ನು ಅಳವಡಿಸುವ ಮೂಲಕ ಅವರಿಗೆ ಹುಟ್ಟು ಹಬ್ಬದ ಶುಭಾಶಯವನ್ನು ತಿಳಿಸಿದೆ.Sign in to your account
Username or Email Address


Password

 Remember Me


