ಮಡಿಕೇರಿ: ಕಾರ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಬುರಗಿಯ ಅಫ್ಜಲ್‍ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ್ ಭಾರೀ ಅಪಾಯದಿಂದ ಪಾರಾಗಿದ್ದಾರೆ.ವಿರಾಜಪೇಟೆ ಬಳಿ ಅಮ್ಮತ್ತಿಯಲ್ಲಿ ನಡೆದ ಕಾರ್ ರೇಸ್ ಸ್ಪರ್ಧೆಯಲ್ಲಿ ರಿತೇಶ್ ಗುತ್ತೇದಾರ್ ಪಾಲ್ಗೊಂಡಿದ್ದರು. ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿತ್ತು.ರಿತೇಶ್ ಹೆಲ್ಮೆಟ್ ಧರಿಸಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ರೇಸ್ ವೀಕ್ಷಿಸುತ್ತಿದ್ದ ಜನರ ಸಮೀಪವೇ ಕಾರು ಪಲ್ಟಿಯಾಗಿ ಬಿದ್ದಿತ್ತು.ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಿತೇಶ್ ಟೈಮಿಂಗ್ ಸೆಟ್ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದೆ. ಒಂದನೇ ಬಂಡೆಯನ್ನು ಕ್ರಾಸ್ ಮಾಡಿದ ಬಳಿಕ ಸ್ಲೋ ಮಾಡುವುದು ಯಾಕೆ ಎಂದು ವೇಗವಾಗಿ ಡ್ರೈವ್ ಮಾಡ್ತಿದ್ದೆ. ಈ ವೇಳೆ ನನ್ನ ಬ್ಯಾಡ್ ಲಕ್ ಈ ರೀತಿ ಆಯ್ತು ಎಂದು ಅವರು ತಿಳಿಸಿದರು. Sign in to your account
Username or Email Address


Password

 Remember Me


