ಬೆಂಗಳೂರು: ಸಾಕು ಪ್ರಾಣಿ ಅಂದ್ರೆ ಥಟ್ ಅಂತಾ ನೆನಪಾಗೋದು ಮುದ್ದಾದ ನಾಯಿಗಳು. ಆದರೆ ಇಲ್ಲೊಬ್ರು ತಮ್ಮ ಮನೆಯಲ್ಲಿ ನಾಯಿಗಿಂತ ಏನೂ ಕಮ್ಮಿ ಇಲ್ಲ ಅನ್ನೋ ಹಾಗೆ ಹುಂಜಗಳನ್ನ ಸಾಕಿದ್ದಾರೆ.ಹೌದು. ಬಸವೇಶ್ವರ ನಗರದ ನಿವಾಸಿ ರೇಖಾ ಅವರು ತಮ್ಮ ಮನೆಯಲ್ಲಿ ಹುಂಜಗಳನ್ನು ಸಾಕಿದ್ದಾರೆ. ಬಾಲ್ ಬಿಸಾಕಿದ್ರೆ ಹೇಗೆ ನಾಯಿ ಅದನ್ನ ಹಿಡಿಯುತ್ತೋ ಹಾಗೆಯೇ ಈ ಹುಂಜಗಳು ಚೆಂಡನ್ನು ಹಿಡಿದು ತರುತ್ತವೆ. ಈ ಹುಂಜಗಳ ಮತ್ತೊಂದು ವಿಶೇಷವೆಂದ್ರೆ ಮನೆಯ ಗೇಟ್ ಸದ್ದಾದ್ರೆ ಕೂಗಿ, ಯಾರೋ ಬಂದಿದ್ದಾರೆ ಅನ್ನೋದನ್ನ ಮನೆಯವ್ರಿಗೆ ತಿಳಿಸುತ್ತವೆ. ಜೊತೆಗೆ ಮನೆಯವರು ಊಟ ತಿನ್ನಿಸಿದ್ರೆ ಮಾತ್ರ ಇವುಗಳು ತಿನ್ನುವುದು.ಈ ಹುಂಜಗಳ ಜೊತೆ ಮನೆ ಮಕ್ಕಳೆಲ್ಲಾ ಸೇರಿ ಆಟವಾಡುತ್ತಾರೆ. ಈ ಮನೆಯ ಮಕ್ಕಳಿಗೆ ಹುಂಜಗಳ ಬೆಸ್ಟ್ ಫ್ರೆಂಡ್. ರೇಖಾ ಅವರು ಒಂದು ವರ್ಷದ ಹಿಂದೆ ಮಕ್ಕಳ ಬಲವಂತಕ್ಕೆ ಹುಂಜಗಳನ್ನ ತಂದಿದ್ದರು. ಹೆಚ್ಚು ದಿನ ಬದುಕಲ್ಲಾ ಅಂತಾ ತಿಳಿದಿದ್ದ ಹುಂಜಗಳು ಈಗ ಮನೆಯ ಸದಸ್ಯರಾಗಿವೆ. Sign in to your account
Username or Email Address


Password

 Remember Me


