ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ 6 ವರ್ಷದ ಬಾಲಕ ಬಲಿಯಾಗೊರೋ ಘಟನೆಯೊಂದು ಹೆಚ್.ಎಸ್.ಆರ್. ಲೇಔಟ್‍ನಲ್ಲಿ ನಡೆದಿದೆ. ಈಜಿಪುರದ ನಿವಾಸಿ ನಿತ್ಯಾನಂದ ಹಾಗೂ ಮುಗೇಶ್ವರಿ ದಂಪತಿಯ ಏಕೈಕ ಪುತ್ರ ಸಂತೋಷ್ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ.ನಡೆದಿದ್ದೇನು?: ಹೆಚ್.ಎಸ್.ಆರ್ ಲೇಔಟ್ ನಲ್ಲಿರುವ ಅಣ್ಣಯ್ಯ ಆಸ್ಪತ್ರೆಯಲ್ಲಿ ಬಾಲಕ ಸಂತೋಷ್ ಗೆ ಸಣ್ಣದೊಂದು ಆಪರೇಷನ್ ಮಾಡಲಾಗಿತ್ತು. ಆದ್ರೆ ಆಪರೇಷನ್ ಸಕ್ಸಸ್ ಆಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕೋರಮಂಗಲದಲ್ಲಿರುವ ಸೆಂಟ್ ಜಾನ್ ಆಸ್ಪತ್ರೆಗೆ ಬಾಲಕನನ್ನ ಕರೆತರಲಾಗಿತ್ತು. ಆದ್ರೆ ಕರೆತರುವ ಮಾರ್ಗ ಮಧ್ಯೆದಲ್ಲಿಯೇ ಬಾಲಕ ಸಾವನ್ನಪ್ಪಿದ್ದಾನೆ ಅಂತಾ ಸೆಂಟ್ ಜಾನ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.ಅಣ್ಣಯ್ಯ ಆಸ್ಪತ್ರೆಯ ವೈದ್ಯರು ನೀಡಿದ ಅನಸ್ತೇಷಿಯಾ ಓವರ್ ಡೋಸ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಾವಿಗೆ ಅಣ್ಣಯ್ಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಪೋಷಕರು ಆರೋಪಿಸಿದ್ದಾರೆ.ಇದೀಗ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.Sign in to your account
Username or Email Address


Password

 Remember Me


