ಮಂಡ್ಯ: ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮಂಡ್ಯ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳಿದ್ದು, ಭಾರೀ ಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.ಮಂಡ್ಯ ತಾಲ್ಲೂಕಿನ ಬಂಕನಹಳ್ಳಿಯಲ್ಲಿ ಐತಿಹಾಸಿಕ ಈಶ್ವರ ದೇವಾಲಯದ ಮೇಲೆ ಸುಮಾರು ನೂರು ವರ್ಷದ ಬೃಹತ್ ಅರಳಿಮರ ಉರುಳಿ ಬಿದ್ದು, ದೇವಾಲಯ ಜಖಂಗೊಂಡಿದೆ.ಕೆ.ಆರ್.ಪೇಟೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಗಾಳಿ ಮಳೆಗೆ ರೈತ ಬಸವರಾಜು ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಇದ್ರಿಂದಾಗಿ ಬಸವರಾಜು ಕುಟುಂಬದವರು ರಾತ್ರಿಯಲ್ಲೇ ಕಷ್ಟಪಡುವಂತಾಯಿತು.Sign in to your account
Username or Email Address


Password

 Remember Me


