ಕಲಬುರಗಿ: ಅಡುಗೆ ಎಣ್ಣೆಯ ಟ್ಯಾಂಕರ್ ಪಲ್ಟಿಯಾಗಿ ತೈಲವನ್ನು ಸ್ಥಳೀಯರು ತುಂಬಿಕೊಂಡು ಹೋಗಿದ್ದಾರೆ. ನಗರದ ಹೊರವಲಯದ ನೃಪತುಂಗ ಕಾಲೋನಿ ಬಳಿ ಟ್ಯಾಂಕರ್ ಪಲ್ಟಿ ಹೊಡೆದಿತ್ತು.ಹೈದ್ರಾಬಾದ್‍ನಿಂದ ನಗರದ ಇಂಡಸ್ಟ್ರೀಯಲ್ ಏರಿಯಾದ ಪಾರ್ಲೇ-ಜಿ ಬಿಸ್ಕಟ್ ಕಂಪನಿಗೆ ತೈಲ ಸರಬರಾಜು ಮಾಡಲಾಗುತ್ತಿತ್ತು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.ಟ್ಯಾಂಕರ್ ಪಲ್ಟಿಯಾಗಿದನ್ನು ಕಂಡ ಸ್ಥಳೀಯರು ಸಿಕ್ಕಿದೆ ಚಾನ್ಸ್ ಅಂತಾ ನಾ ಮುಂದು.. ತಾ ಮುಂದು.. ಅಂತಾ ಎಣ್ಣೆಯನ್ನು ಬಿಂದಿಗೆ-ಬಕೆಟ್‍ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಅಂದಾಜು 13 ಲಕ್ಷ ರೂಪಾಯಿ ಮೌಲ್ಯದ 20 ಟನ್ ನಷ್ಟು ತೈಲ ಇದೀಗ ಸ್ಥಳೀಯರ ಪಾಲಾಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ವಿವಿ ಪೊಲೀಸರು ಸ್ಥಳಾಕ್ಕಗಮಿಸಿ ನೆರದಿದ್ದ ಜನರನ್ನು ಚದುರಿಸಿದ್ದಾರೆ.  Sign in to your account
Username or Email Address


Password

 Remember Me


