ವಿಜಯಪುರ: ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರನ್ನು ಮಕ್ಕಳು ಚಾಲನೆ ಮಾಡಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ3 ವರ್ಷ ಪ್ರಾಯದ ಶಬನಮ್ ಕುಣಬಿ ಹಾಗೂ 5 ವರ್ಷದ ಅಬುತಾಲೀಬ್ ಮೃತ ದುರ್ದೈವಿಗಳು. ಮನೆ ಮುಂದೆ ಟ್ಯಾಕ್ಟರ್ ತಂದು ನಿಲ್ಲಿಸಿದ್ದ ತಂದೆ ಕೀಯನ್ನು ಟ್ಯಾಕ್ಟರ್‍ನಲ್ಲೇ ಮರೆತು ಹೋಗಿದ್ದಾರೆ. ಇದೇ ವೇಳೆ ಆಟವಾಡಲು ಬಂದ ಮಕ್ಕಳು ಆಟವಾಡುತ್ತಾ ಕೀಯನ್ನು ತಿರುವಿದ್ದಾರೆ. ಇದರ ಪರಿಣಾಮ ಟ್ಯಾಕ್ಟರ್ ಚಾಲನೆಯಾಗಿ ಮನೆಯ ಗೋಡೆಗೆ ಗುದ್ದಿದೆ. ಇದರಿಂದಾಗಿ ಚಾಲಕ ಸೀಟನಲ್ಲಿ ಕುಳಿತು ಆಟವಾಡುತ್ತಿದ್ದ ಶಬನಮ್ ಹಾಗೂ ಅಬುತಾಲೀಬ್ ಮೃತಪಟ್ಟಿದ್ದಾರೆ.ಘಟನೆಯಲ್ಲಿ ಲಾಲಸಾಬ್, ಫಾತಿಮಾ ಬಾನು, ಫಹಿಮಾ ಎಂಬ ಮಕ್ಕಳು ಗಾಯಗೊಂಡಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


