ಬೆಂಗಳೂರು: ನಗರದ ಯುವತಿಯೊಬ್ಬಳ ಜೊತೆ ಪೋಷಕರ ಎದುರೇ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 40 ವರ್ಷದ ಮಹಮ್ಮದ್ ಸಲೀಂ ಬಂಧಿತ ಕಾಮುಕ.ನಡೆದಿದ್ದೇನು?: ಬೆಂಗಳೂರಿನ ಯುವತಿ ತನ್ನ ಪೋಷಕರ ಜೊತೆ ಹೈದರಾಬಾದ್‍ಗೆ ಪ್ರವಾಸಕ್ಕೆ ತೆರಳಿದ್ದಳು. ಅಂತೆಯೇ ಅಲ್ಲಿ ಆಕೆ ಟ್ರಾವೆಲ್ ಏಜೆಂಟ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಳು. ಈ ವೇಳೆ ಕ್ಯಾಬ್ ಚಾಲಕ ಅಪ್ಪ ಅಮ್ಮ- ಬಂಧುಗಳ ಸಮ್ಮುಖದಲ್ಲೇ ಯುವತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಕಡೆಯವರು ದಾರಿ ಮಧ್ಯೆ ಕಾರ್ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ರೆ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಬೆಂಗಳೂರು ಸೇರಲು ಟ್ರೈನ್ ಮಿಸ್ ಆಗತ್ತೆ ಅಂತಾ ಯುವತಿ ತನ್ನ ಪೋಷಕರೊಂದಿಗೆ ಬೆಂಗಳೂರಿಗೆ ಮರಳಿದ್ದಾಳೆ. ಬಳಿಕ ವಾಟ್ಸಾಪ್ ಮೂಲಕ ಹೈದರಾಬಾದ್ ಪೊಲೀಸ್ ವೆಬ್ ಸೈಟ್ ಷೀ-ಟೀಮ್‍ಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.ಯುವತಿಯ ವಾಟ್ಸಾಪ್ ದೂರಿಗೆ ಸ್ಪಂದಿಸಿದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


