ಬೆಂಗಳೂರು: ಬಳ್ಳಾರಿ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಅಕ್ರಮ ಮತದಾನ ಮಾಡಿದ್ದಾರೆ ಅನ್ನೋದಾಗಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಅವರು ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಬೆಂಗಳೂರಿನ ವಿಳಾಸಕ್ಕೆ ವರ್ಗಹಿಸಿಕೊಂಡಿದ್ರು. ಮಾತ್ರವಲ್ಲ ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಮತದಾನ ಸಹ ಮಾಡಿದ್ರು.ಇದೀಗ ಬಳ್ಳಾರಿ ಪಾಲಿಕೆಯಲ್ಲಿಯೂ ಮೇಯರ್-ಉಪಮೇಯರ್ ಆಯ್ಕೆಗೆ ಮತದಾನ ಮಾಡಿದ್ದಾರೆ. ಈ ಮೂಲಕ ಜನ ಪ್ರತಿನಿಧಿಯಾದವರು ಎರಡೆರೆಡು ಕಡೆ ಅಕ್ರಮ ಮತದಾನ ಮಾಡಿದ್ದು, ಚುನವಣಾ ಆಯೋಗ ಅಲ್ಲಂ ಪ್ರಭು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪದ್ಮನಾಭ ರೆಡ್ಡಿ ಆಗ್ರಹಿಸಿದ್ರು. Sign in to your account
Username or Email Address


Password

 Remember Me


