ಬೆಂಗಳೂರು: ಕಾದು ಕೆಂಡವಾಗಿದ್ದ ರಾಜ್ಯದಲ್ಲಿ ಸೋಮವಾರ ಸಂಜೆ ವೇಳೆ ಮಳೆರಾಯ ತಂಪೆರೆದಿದ್ದ. ಈ ಮೂಲಕ ಹಾಟ್ ಸಿಟಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳು ತಣ್ಣಗಾಗಿದ್ದವು.ಇದು ಮುಂಗಾರು ಪೂರ್ವ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಕೆಲ ಪ್ರದೇಶಗಳಲ್ಲಿ ಮಳೆಯಾಗಲಿದೆ.ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮಡಿಕೇರಿ, ಹಾಸನ, ರಾಮನಗರದಲ್ಲಿ ಇಂದು ಮಳೆಯಾಗಲಿದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಪ್ರದೇಶದಲ್ಲಿ ಕೂಡ ಮಳೆಯಾಗಲಿದೆ. ಬಿಸಿಲ ನಾಡು ಬಳ್ಳಾರಿ ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇರುವುದು ಕಂಡುಬಂದಿಲ್ಲ.Sign in to your account
Username or Email Address


Password

 Remember Me


