ರಾಯಚೂರು: ದೇವದುರ್ಗ ತಾಲೂಕಿನ ಬೊಮ್ಮನಹಳ್ಳಿ ಬಳಿ ಆಟೋರಿಕ್ಷಾ ಪಲ್ಟಿಯಾಗಿ ಅಜ್ಜಿ ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೊದಿರಾಮನಗೊಂಡಾ ಗ್ರಾಮದ 9 ತಿಂಗಳ ಮಗು ಬಸಲಿಂಗಮ್ಮ, 68 ವರ್ಷದ ರಂಗಮ್ಮ ಮೃತ ದುರ್ದೈವಿಗಳು.ಜಾಲಹಳ್ಳಿಯ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ಜಾತ್ರೆಗೆ ತೆರಳಿದ್ದ ಕುಟುಂಬ ಆಟೋರಿಕ್ಷಾದಲ್ಲಿ ಗ್ರಾಮಕ್ಕೆ ಮರಳುವಾಗ ಆಟೋ ಪಲ್ಟಿ ಹೊಡೆದಿದೆ. ವೇಗದಲ್ಲಿ ಚಲಿಸುತ್ತಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.ವಾಹನದಲ್ಲಿದ್ದ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


