ಚಿತ್ರದುರ್ಗ: ನಿಂತಿದ್ದ ಟಾಟಾ ವೆಂಚರ್‍ಗೆ ಮಹಿಂದ್ರಾ ಮ್ಯಾಕ್ಸಿಮೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪಿದ್ದು, 21 ಜನರು ಗಾಯಗೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಐಮಂಗಲ ಗ್ರಾಮದ ನಿವಾಸಿ ಜುಬೇರ್ ಅಹ್ಮದ್ (40) ಮತ್ತು ಶಿರಸಿ ನಿವಾಸಿ ಟಿಪ್ಪುಸಾಬ್ (45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಟಾಟಾ ವೆಂಚರ್‍ನಲ್ಲಿ ಒಟ್ಟು 9 ಜನರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಶವಸಂಸ್ಕಾರಕ್ಕಾಗಿ ಶಿರಸಿಯಿಂದ ತುಮಕೂರಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.ಸ್ಥಳಕ್ಕೆ ಐಮಂಗಲ ಠಾಣೆಯ ಪೊಲೀಸರು ಆಗಮಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಎಸ್‍ಪಿ ರಂಗರಾಜನ್ ಮತ್ತು ಡಿವೈಎಸ್‍ಪಿ ಎಸ್.ನಾಗರಾಜ್ ಭೇಟಿ ನೀಡಿದ್ದಾರೆ.ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


