ಬೆಂಗಳೂರು: ಶ್ರೀರಾಮಪುರದ ರೌಡಿಶೀಟರ್ ನಾಗ 40 ಕೋಟಿ ರೂಪಾಯಿ ಹೊಸ ನೋಟ್‍ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಬರೋಬ್ಬರಿ 200 ಕೋಟಿ ರೂ. ವ್ಯವಹಾರ ಮಾಡಿದ್ದು, 40 ಕೋಟಿ ರೂಪಾಯಿ ಪಿಂಕ್ ನೋಟು ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರಿಗೆ ಹಳೇನೋಟು, ವೈಟ್ ಪೇಪರ್ ತೋರಿಸಿ, ಹೊಸ ನೋಟುಗಳೊಂದಿಗೆ ಪರಾರಿಯಾಗೋ ಮೂಲಕ ಚಳ್ಳೆಹಣ್ಣು ತಿನ್ನಿಸಿದ್ದಾನಂತೆ.ಹೆಣ್ಣೂರು ಪೊಲೀಸರು ಕೋರ್ಟಿಗೆ ಹೋಗಿ ಸರ್ಚ್‍ವಾರೆಂಟ್ ಪಡೆದುಕೊಂಡಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಅಲರ್ಟ್ ಆದ ನಾಗ, ಹಳೇನೋಟು ಮನೆಯಲ್ಲಿ ಬಿಟ್ಟು ತಮಿಳುನಾಡಿಗೆ ಪರಾರಿಯಾಗಿದ್ದನಂತೆ. ಬರೀ ಕಾಯಿನ್ ಬೂತ್‍ನಿಂದ್ಲೆ ಆಟವಾಡ್ತಿಸ್ತಿರೋ ನಾಗ, ತಾನಿರುವ ಸ್ಥಳದ ಮಾಹಿತಿ ಮಾತ್ರ ಬಿಟ್ಟುಕೊಡ್ತಿಲ್ಲ. ಸಾಲದ್ದಕ್ಕೆ ಮೊಬೈಲ್ ಕೂಡ ಬಳಕೆ ಮಾಡದೇ ಪೊಲೀಸರನ್ನು ಇಡೀ ತಮಿಳುನಾಡು ಸುತ್ತುವಂತೆ ಮಾಡ್ತಿದ್ದಾನೆ.ನಾಗನ ಮನೆಯಲ್ಲಿ ಸಿಕ್ಕಿರೋ ಬಿಳಿ ಪೇಪರ್, ಹಳೇ ನೋಟುಗಳು ಯಾರದ್ದು ಅನ್ನೋದು ಈಗಿರೋ ಪ್ರಶ್ನೆ. ನಾಗ ಕೇವಲ ರೌಡಿಸಂ ಫೀಲ್ಡನ್ನು ಮಾತ್ರ ಆಯ್ಕೆ ಮಾಡಿಕೊಂಡಿರಲಿಲ್ಲ. ಬದಲಿಗೆ ಕ್ರಿಕೆಟ್ ಬೆಟ್ಟಿಂಗ್, ಬ್ಲಾಕ್ ಅಂಡ್ ವೈಟ್ ದಂಧೆಯಲ್ಲೂ ಎಕ್ಸ್ ಪರ್ಟ್ ಆಗಿದ್ದು, ದೊಡ್ಡ ಕುಳಗಳಿಗೆ ನಾಮ ಇಟ್ಟಿದ್ದಾನೆ.Sign in to your account
Username or Email Address


Password

 Remember Me


