ಕಲಬುರಗಿ: ಪಿಹೆಚ್‍ಡಿ ವಿದ್ಯಾರ್ಥಿನಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.31 ವರ್ಷದ ಶ್ರೀದೇವಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೇ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ಶ್ರೀದೇವಿ ಗುಲ್ಬರ್ಗಾ ವಿವಿ ಅರ್ಥಶಾಸ್ತ್ರ ವಿಭಾಗದ ಪಿಹೆಚ್‍ಡಿ ವಿದ್ಯಾರ್ಥಿನಿಯಾಗಿದ್ದರು. ಈಕೆ ಸಾಯುವ ಮುನ್ನ ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಕಾಣೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.ಆತ್ಮಹತ್ಯೆಗೆ ಕಾರಣವೇನು?: ತಿಪ್ಪಣ್ಣ ಎಂಬ ವ್ಯಕ್ತಿ ತನಗೆ 5 ವರ್ಷಗಳಿಂದ ಪರಿಚಯವಿದ್ದು, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ತುಂಬಾ ತೊಂದರೆ ಕೊಡುತ್ತಿದ್ದಾನೆ. ನನ್ನ ಗೈಡ್ ಕೂಡ ದುಡ್ಡಿಗಾಗಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ತಿಪ್ಪಣ್ಣ ಕಾರಣ ಎಂದೆಲ್ಲಾ ಡೆತ್‍ನೋಟ್‍ನಲ್ಲಿ ಶ್ರೀದೇವಿ ಬರೆದಿದ್ದಾರೆ.ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


