ಕಲಬುರಗಿ: ಜಿಲ್ಲೆಯ ಆರ್‍ಜಿ ನಗರ ಪೊಲೀಸರು ಕಾರ್ಯಚರಣೆ ನಡೆಸಿ ಡಿಯೋ ಬೈಕ್‍ಗಳನ್ನ ಕದಿಯುತ್ತಿದ್ದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ.ರಾಕೇಶ ಹಾಗೂ ಸೋಮನಾಥ ಬಂಧಿತ ಆರೋಪಿಗಳು. ಬಂಧಿತರಿಂದ ಪೊಲೀಸರು ನಾಲ್ಕು ಡಿಯೋ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಖದೀಮರು ಕೇವಲ ಡಿಯೋ ಬೈಕ್ ಮಾತ್ರ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ವಾಹನವನ್ನ ಅವರ ಗಲ್9 ಫ್ರೆಂಡ್ಸ್ ಗೆ ನೀಡುತ್ತಿದ್ದರು. ಆದ್ರೆ ಬೈಕ್ ಕದಿಯುತ್ತಿರೋ ವಿಚಾರವನ್ನು ಮಾತ್ರ ತಮ್ಮ ಗರ್ಲ್ ಫ್ರೆಂಡ್ಸ್ ಬಳಿ ಖದೀಮರು ಮುಚ್ಚಿಟ್ಟಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಸಿಕ್ಕಿಬಿದ್ದಿದ್ದು ಹೇಗೆ?: ಈ ಖದೀಮರು ಕದ್ದ ಬೈಕಿನಲ್ಲಿದ್ದ ಎಟಿಎಂ ಕಾರ್ಡ್‍ವೊಂದರಿಂದ ಹಣ ಡ್ರಾ ಮಾಡಿದ್ದರು. ಬೈಕ್ ಕಳ್ಳರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಜಾಡು ಹಿಡಿದು ಹೋದ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನ ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿಗಳು ಬೈಕ್ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಓಂಕಾರ್ ತಲೆಮರೆಸಿಕೊಂಡಿದ್ದು, ಇದೀಗ ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರ್‍ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


