ರಾಯಚೂರು: ತಂದೆ ಮಗನನ್ನು ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಮಾನ್ವಿಯ ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕುರಕುಂದಾ ಗ್ರಾಮದ 59 ವರ್ಷದ ನಬೀಸಾಬ್ ಹಾಗೂ 19 ವರ್ಷದ ಅಬ್ದುಲ್ ನಜೀರ್ ಕೊಲೆಯಾಗಿರುವ ದುರ್ದೈವಿಗಳು. ಮಾನ್ವಿ ತಾಲೂಕು ಪಂಚಾಯ್ತಿ ಕುರಕುಂದಾ ಕ್ಷೇತ್ರದ ಬಿಜೆಪಿ ಸದಸ್ಯ ದೇವರಾಜ್ ನಾಯಕ್ ಈ ಎರಡು ಕೊಲೆಗಳನ್ನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.ಗ್ರಾಮಕ್ಕೆ ಮರಳುತ್ತಿದ್ದ ನಬೀಸಾಬ್‍ನನ್ನ ಮಾಡಗಿರಿ ಕ್ಯಾಂಪ್‍ನ ಕ್ರಾಸ್ ಬಳಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ವಿಷಯ ತಿಳಿದು ತಂದೆಯ ಶವ ನೋಡಲು ಕುರಕುಂದಾದಿಂದ ಬರುತ್ತಿದ್ದ ಮಗ ಅಬ್ದುಲ್ ನಜೀರ್‍ನನ್ನ ಹುಣಚಾಡ ಕ್ರಾಸ್ ಬಳಿ ಹೊಡೆದು ಹತ್ಯೆಗೈಯ್ಯಲಾಗಿದೆ.ಮಾನ್ವಿ ಕಾಂಗ್ರೆಸ್ ಶಾಸಕ ಹಂಪಯ್ಯನಾಯಕ್‍ರ ದೂರದ ಸಂಬಂಧಿ ಎನ್ನಲಾಗಿರುವ ದೇವರಾಜ್ ನಾಯಕ್ ಬಿಜೆಪಿಯಿಂದ ತಾಲೂಕು ಪಂಚಾಯ್ತಿ ಸದಸ್ಯನಾಗಿದ್ದ. ಈ ಹಿಂದೆ ದೇವರಾಜ್‍ನ ತಾತನ ಕೊಲೆ ಪ್ರಕರಣದಲ್ಲಿ ನಬೀಸಾಬ್ ಪ್ರಮುಖ ಸಾಕ್ಷಿಯಾಗಿದ್ದ ಎನ್ನಲಾಗಿದೆ. ಇದೇ ದ್ವೇಷದಲ್ಲಿ ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದೆ.ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


