ಬೆಂಗಳೂರು: ಮಾಜಿ ಸಿಎಂ ಎಸ್‍ಎಂ ಕೃಷ್ಣ ಹಾಗೂ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.ಉಪಚುನಾಚವಣೆಯಲ್ಲಿ ಗುಂಡ್ಲುಪೇಟೆ ಹಾಗೂ ನಂಜನಗೂಡು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಸ್‍ಎಂ ಕೃಷ್ಣ, ಕುಮಾರ್ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‍ಗೆ ಗೆಲುವು ಸಿಕ್ಕಿದೆ. ಜನ ಯಾವುದೇ ರೀತಿಯ ಬಣ್ಣದ ಮಾತುಗಳಿಗೆ ಸೋಲುವುದಲ್ಲ. ಜನ ಪ್ರತ್ಯುತ್ತರ ನೀಡಿದ್ದಾರೆ ಅಂತ ಹೇಳಿದ್ರು.ಜಾತಿ ಆಧಾರದ ಮೇಲೆ ಚುನಾವಣೆ ಗೆದ್ದಿಲ್ಲ. ಜನರೇ ತಕ್ಕ ಉತ್ತರ ನೀಡಿದ್ದಾರೆ. ಇನ್ನು ಮುಂದೆ ಕೂಡ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಮತದಾರರು ನಮ್ಮ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಅಂದ್ರು.ಕಾಂಗ್ರೆಸ್ ಜಯಭೇರಿ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ರು.ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್ https://t.co/7NdHUf46z5#Karnataka #bypolls #Congress pic.twitter.com/pHPnJMllva— PublicTV (@publictvnews) April 13, 2017ನಂಜನಗೂಡಿನಲ್ಲಿ ಕಾಂಗ್ರೆಸ್‍ಗೆ ‘ಪ್ರಸಾದ’ https://t.co/2g84dDENM0#Karnataka #bypolls #Congress #Nanjanagud #kalalekeshavamurthy #BJP pic.twitter.com/I412MgJSSg— PublicTV (@publictvnews) April 13, 2017Sign in to your account
Username or Email Address


Password

 Remember Me


