ಮಂಗಳೂರು: 2008ರಲ್ಲಿ ಮಂಗಳೂರಿನ ವಿವಿಧೆಡೆ ಉಗ್ರವಾದಿ ಚಟುವಟಿಕೆ ಆರೋಪದಲ್ಲಿ ಬಂಧಿತರಾಗಿದ್ದವರ ಪೈಕಿ ಮೂವರಿಗೆ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಸೋಮವಾರ ಮೂವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಹೇಳಿದ್ದ ಕೋರ್ಟ್, ಬುಧವಾರ ಶಿಕ್ಷೆಯ ಪ್ರಮಾಣವನ್ನು ತಿಳಿಸುವುದಾಗಿ ಹೇಳಿತ್ತು.ಸೈಯದ್ ಮಹಮ್ಮದ್ ನೌಶಾದ್,ಅಹ್ಮದ್ ಬಾವಾ ಅಬುಬಕ್ಕರ್, ಫಕೀರ್ ಅಹ್ಮದ್ ಎಂಬ ಮೂವರು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಸಾಕ್ಷ್ಯಾಧಾರಗಳ ಕೊರತೆಯಿಂದ ಶಬೀರ್ ಭಟ್ಕಳ, ಅಹ್ಮದ್ ಅಲಿ, ಜಾವೇದ್ ಅಲಿ ಮತ್ತು ಉಮರ್ ಫಾರೂಕ್ ಅವರನ್ನು ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದೆ.2008ರಲ್ಲಿ ಮುಂಬೈ ಮತ್ತು ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆ, ಹಳೆಯಂಗಡಿ, ಪಾಂಡೇಶ್ವರದ ಸುಭಾಷ್‍ನಗರದಿಂದ ಏಳು ಮಂದಿಯನ್ನು ಉಗ್ರವಾದ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದ್ದರು. ಆ ಬಳಿಕ ದೇಶವಿರೋಧಿ ಚಟುವಟಿಕೆ, ವಿಧ್ವಂಸಕ ಕೃತ್ಯಕ್ಕೆ ಸಂಚು, ಸ್ಪೋಟಕ ತಯಾರಿಕೆ ಆರೋಪದಲ್ಲಿ ಏಳು ಮಂದಿ ವಿರುದ್ಧ ಕೇಸು ದಾಖಲಾಗಿತ್ತು. Sign in to your account
Username or Email Address


Password

 Remember Me


