ಬೆಂಗಳೂರು: ಬಡ್ಡಿಗೆ ಹಣ ಕೊಡುತ್ತಿದ್ದ ಗಂಡ ವಾಪಸ್ಸು ಹಣಕೊಡದೇ ಇದ್ರೆ ಮಹಿಳೆಯರನ್ನು ಬೆಡ್‍ರೂಂಗೆ ಕರಿಯುತ್ತಿದ್ದ ಗಂಡನ ಲಂಪಟತನವನ್ನು ನೋಡಿದ ಪತ್ನಿ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಳೆ.ಕುಮಾರ್ ಕೊಲೆಯಾದ ವ್ಯಕ್ತಿ. ಡೋರಿನ್ ಗಂಡನನ್ನು ಕೊಲೆ ಮಾಡಿಸಿದ ಪತ್ನಿ. ಡೋರಿನ್ ಪತಿಯ ಬಳಿ ಸಾಲ ಪಡೆದಿದ್ದ ಬೈಯಪ್ಪನಹಳ್ಳಿ ನಿವಾಸಿ ಶ್ರೀಧರ್ ಎಂಬಾತನಿಗೆ ಪತಿಯನ್ನು ಕೊಲ್ಲಲು 30 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದಳು.ಏನಿದು ಪ್ರಕರಣ?
ಏಪ್ರಿಲ್ 6 ರಂದು ಸಂಜೆ ಪುಲಕೇಶಿ ನಗರದ ಬಳಿಯ ಕಲ್ಪಳ್ಳಿ ಸ್ಮಶಾನದ ಬಳಿಯಲ್ಲಿ ಕುಮಾರ್‍ನನ್ನು ಕೊಲೆ ಮಾಡಲಾಗಿತ್ತು. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಕುಮಾರ್‍ನನ್ನು ಹಳೆಯ ದ್ವೇಷದಲ್ಲಿ ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಮೊದಲಿಗೆ ಅನುಮಾನ ವ್ಯಕ್ತಪಡಿಸಿದ್ದರು.ಪೊಲೀಸರು ತನಿಖೆ ಆರಂಭಿಸಿದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಕುಮಾರ್ ಹೆಂಗಸರಿಗೆ ಸಾಲ ಕೊಡುತ್ತಿದ್ದ. ಸಾಲ ಏನಾದ್ರೂ ಹಿಂದಿರುಗಿಸಿ ಕೊಡದೇ ಇದ್ರೆ ಅವರನ್ನು ಬೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಕೊನೆ ಕೊನೆಗೆ ಹೆಂಗಸರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಇದ್ರಿಂದ ಬೇಸತ್ತ ಹೆಂಡತಿ ಗಂಡನಿಂದ ಮುಕ್ತಿ ಹೊಂದಬೇಕು ಎಂದು ತೀರ್ಮಾನಿಸಿ ಗಂಡನ ಬಳಿ ಸುಮಾರು 5 ಲಕ್ಷ ರೂ. ಸಾಲ ಪಡೆದು ಬಡ್ಡಿ ಕಟ್ಟುತ್ತಿದ್ದ ಶ್ರೀಧರ್ ಜೊತೆ ಸೇರಿ ಪ್ಲಾನ್ ಹಾಕಿದ್ದಳು.ಡೋರಿನ್‍ನೊಂದಿಗೆ ಮಂಚವನ್ನು ಹಂಚಿಕೊಂಡಿದ್ದ ಶ್ರೀಧರ್ ತನ್ನ ಗ್ಯಾಂಗ್ ಜೊತೆಗೂಡಿ ಕುಮಾರ್‍ನನ್ನು ಮುಗಿಸೋಕೆ ಹುಡ್ಗೀರ ಜೊತೆಯಲ್ಲಿ ಫೋನ್ ಮಾಡಿ ಕರೆಸಿ ಕೊಲೆ ಮಾಡಿದ್ದನು.ಸುಳಿವೇ ಇಲ್ಲದ ಪ್ರಕರಣದ ಹಿಂದೆ ಬಿದ್ದಿದ್ದ ಬೈಯಪ್ಪನಹಳ್ಳಿ ಪೊಲೀಸ್ರು ಕುಮಾರ್‍ನ ಹೆಂಡತಿ ಡೋರಿನ್, ಶ್ರೀಧರ್ ಮತ್ತು ಗ್ಯಾಂಗ್‍ನ ಸದಸ್ಯರನ್ನು ಈಗ ಸೆರೆಮನೆಗೆ ಕಳುಹಿಸುವಲ್ಲಿ ಯಶ್ವಸಿಯಾಗಿದ್ದಾರೆ.Sign in to your account
Username or Email Address


Password

 Remember Me


