ಬೆಳಗಾವಿ: ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಗ್ರಾಮಕ್ಕೆ ಬರಬೇಕೆಂದು ಪಟ್ಟು ಹಿಡಿದು ಕಳೆದ ನಾಲ್ಕು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ್ದಾರೆ.ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದ ಪ್ರವೀಣ್ ಪಾಟೀಲ್, ಸಚಿನ್ ಅಸ್ವಸ್ಥ ಯುವಕರು. ಮಾರ್ಚ್ 8ರಂದು ಸುದೀಪ್ ನೋಡಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸೀಮೆ ಎಣ್ಣೆ ತೆಗೆದುಕೊಂಡು ಬೆಳಗಾವಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದರು.ಇಬ್ಬರು ಯುವಕರ ಸುದ್ದಿ ತಿಳಿದ ನಟ, ಸುದೀಪ್ ಇಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿಸಿ ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿದ್ದರು. ಆದರೆ ನಟ ಸುದೀಪ್ ತಮ್ಮ ಗ್ರಾಮಕ್ಕೆ ಆಗಮಿಸಬೇಕು ಎಂದು ಇದೀಗ ಅಭಿಮಾನಿಗಳು ಪಟ್ಟು ಹಿಡಿದ್ದಾರೆ. ಅಸ್ವಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. Sign in to your account
Username or Email Address


Password

 Remember Me


