ಮಂಗಳೂರು: ಮದುವೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಹುಚ್ಚಾಟ ಇಡೀ ಪೆಂಡಾಲನ್ನೇ ಸುಟ್ಟು ಭಸ್ಮ ಮಾಡಿದ ಘಟನೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.ಈ ಬೆಂಕಿ ಆಕಸ್ಮಿಕದಿಂದ ಪೆಂಡಲ್ ಹೊತ್ತಿ ಉರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ನಾನಾ ರೀತಿಯಲ್ಲಿ ಡಿಜೆ ಸಾಂಗ್‍ಗೆ ಕುಣಿದು ಕುಪ್ಪಳಿಸಿದ್ದಾರೆ.ಈ ಮೆಹೆಂದಿ ಕಾರ್ಯಕ್ರಮದಲ್ಲಿ ಇಬ್ಬರು ಯುವಕರು ವಿಭಿನ್ನವಾಗಿ ಕಾಣಿಸಿಕೊಳ್ಳಲು ದೆವ್ವದಂತೆ ವೇಷವನ್ನು ತೊಟ್ಟು ಕುಣಿಯುತ್ತಿದ್ದರು. ಬಳಿಕ ಓರ್ವ ಎರಡೂ ಕೈಗಳಲ್ಲಿ ಬೆಂಕಿಯ ಪಂಜು ಹಿಡಿದುಕೊಂಡು ಪೆಂಡಾಲ್ ಕೆಳಗೆ ಆಗಮಿಸಿ ಕುಣಿಯಲಾರಂಭಿಸಿದ್ದ. ಪಂಜನ್ನು ಮೇಲಕ್ಕೆತ್ತಿ ಕುಣಿಯುತ್ತಿದ್ದು, ಬೆಂಕಿ ಪೆಂಡಾಲ್‍ಗೆ ಹೊತ್ತಿಕೊಂಡಿದೆ.ಸಂಪೂರ್ಣ ಸಿಲ್ಕ್ ನ ಪೆಂಡಾಲ್ ಆಗಿದ್ದರಿಂದ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಪೆಂಡಾಲ್‍ಗೆ ಹೊತ್ತಿಕೊಂಡಿದೆ. ಪರಿಣಾಮ ಪೆಂಡಾಲ್ ಸಂಪೂರ್ಣ ಕೆಳಗುರುಳಿ ಬಿದ್ದಿದೆ. ಪೆಂಡಾಲ್‍ನ ಕೆಳಗೆ ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.Sign in to your account
Username or Email Address


Password

 Remember Me


