ಬೆಂಗಳೂರು: ಪರಿಚಿತ ಯುವಕನೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಅತ್ಯಾಚಾರ ನಡೆಸಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಚಂದ್ರಶೇಖರ್ ಬಂಧಿತ ಯುವಕ. ನೊಂದ ಯುವತಿಯ ಮನೆಯ ಬಳಿ ವಾಸವಾಗಿದ್ದ ಚಂದ್ರಶೇಖರ್ ಕಳೆದ 3 ತಿಂಗಳಿನಿಂದ ತನ್ನನ್ನು ಮದುವೆ ಆಗುವಂತೆ ಟಾರ್ಚರ್ ಕೊಡುತ್ತಿದ್ದನು. ತನ್ನ ಮೊಬೈಲ್ ನಂಬರ್ ನೀಡಿ ಕೊಟ್ಟು ಫೋನ್ ಮಾಡುವಂತೆ ಚಂದ್ರಶೇಖರ್ ಪೀಡಿಸುತ್ತಿದ್ದನು ಎಂದು ತಿಳಿದು ಬಂದಿದೆ.ಏಪ್ರಿಲ್ 7 ರಂದು ಮನಗೆ ನುಗ್ಗಿ ಯುವತಿ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಈ ವೇಳೆ ಯುವತಿ ತಾಯಿಯ ಕೈಗೆ ಚಂದ್ರಶೇಖರ್ ಸಿಕ್ಕಿದ್ದಾನೆ. ಇದರಿಂದ ಭಯಭೀತನಾದ ಚಂದ್ರ ಯುವತಿಯ ತಾಯಿಯನ್ನು ತಳ್ಳಿ ಮನೆಯಿಂದ ಪರಾರಿಯಾಗಿದ್ದನು.ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


