ಮಂಗಳೂರು: ಮೂಡುಬಿದಿರೆಯ ಅಳಿಯೂರು ಎಂಬಲ್ಲಿ ಬಾವಿಗೆ ಹಾರಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಂಧ್ಯಾ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ತಿಂಗಳ ಹಿಂದೆ ಸಂಧ್ಯಾ ಅವರು ವಕೀಲರೊಬ್ಬರನ್ನು ವಿವಾಹವಾಗಿದ್ದರು.ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಮೂಲದ ಸಂಧ್ಯಾ ಈ ಹಿಂದೆ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಸದಾ ನಗುಮುಖವನ್ನು ಹೊಂದಿದ್ದ ಸಂಧ್ಯಾ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ, ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.

 Advertisement 










 Advertisement 











 Advertisement 




Sign in to your account
Username or Email Address


Password

 Remember Me


