ಬೆಂಗಳೂರು: ಪೊಲೀಸ್ ಚಿತಾ ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಎಸ್‍ಐ ಜಗದೀಶ್ ಎಂಬವರಿಗೆ ಗಂಭಿರವಾಗಿ ಗಾಯವಾಗಿರೋ ಘಟನೆ ಬೆಂಗಳೂರಿನ ತಿಮ್ಮಯ್ಯ ಸರ್ಕಲ್ ಬಳಿ ನಡೆದಿದೆ.ಕಬ್ಬನ್ ಪಾರ್ಕ್ ಎಎಸ್‍ಐ ಆಗಿರೋ ಜಗದೀಶ್ ಅವರು ತಡರಾತ್ರಿ ನೈಟ್ ರೌಂಡ್ಸ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ರೋಹನ್ ಎಂಬಾತ ಹಿಂದಿನಿಂದ ಚಿತಾ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಜಗದೀಶ್ ಅವರನ್ನ ಮಲ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾರ್ ಚಾಲಕ ರೋಹನ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


