ಬೆಂಗಳೂರು: ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ಭಾಗವಾಗಿ ನಡೆದ ಕಾವೇರಿ ಹೋರಾಟ (Cauvery Protest) ಪ್ರತಿಭಟನಾ ಸಭೆಯಲ್ಲಿ ಗೈರಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ (Jaggesh) ಅನಾರೋಗ್ಯದ ನಡುವೆಯೂ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.ಇಂದು (ಶನಿವಾರ) ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಜಗ್ಗೇಶ್‌ ಅವರು, ಕಾವೇರಿ ಹೋರಾಟದ ಪ್ರತಿಭಟನಾ ಸಭೆಗೆ ಬಾರದೇ ಇದ್ದಿದ್ದಕ್ಕೆ ಕ್ಷಮೆ ಇರಲಿ. ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ. ಮೊದಲು ಅದರ ಇತಿಹಾಸ ಎಲ್ಲರೂ ಅರಿಯಬೇಕು ಎಂದು ಹೇಳಿದರು. ಇದನ್ನೂ ಓದಿ: Karnataka Bandh: ಎಲ್ಲ ರಾಜ್ಯದ ರೈತರೂ ಒಂದೇ, ಸರಕಾರಗಳು ಕೂತು ಮಾತನಾಡಲಿ : ನಟ ಶಿವಣ್ಣಮಹಾರಾಜರು ಆಗ ನದಿಗೆ ಅಡ್ಡಲಾಗಿ ಚೆಕ್ ಪಾಯಿಂಟ್‌ ನಿರ್ಮಿಸಿದ್ದರು. ಕೊನೆಗೆ ಡ್ಯಾಮ್‌ ಕಟ್ಟಲು ಬಂದಾಗ ತಡೆಯಲು ಬಂದಿದ್ದರು. ಮೆಟ್ಟೂರು ಡ್ಯಾಂ 6 ವರ್ಷದಲ್ಲಿ ಕಟ್ಟಿಕೊಂಡರು. ಆದ್ರೆ ನಮಗೆ 20 ವರ್ಷ ಬೇಕಾಯಿತು. ಕಾವೇರಿ ಹುಟ್ಟೋದು ಕರ್ನಾಟಕದಲ್ಲೇ, ಹರಿಯೋದು ಕರ್ನಾಟಕದಲ್ಲೇ, ಆದ್ರೆ ಬಳಕೆ ಮಾತ್ರ ಅವರದ್ದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿನಟ ಜಗ್ಗೇಶ್ ಅವರು CT ಸ್ಕ್ಯಾನ್ ಮಾಡಿಸುತ್ತಿದ್ದ ಕೆಲವು ಚಿತ್ರಗಳನ್ನ ನಿನ್ನೆ (ಶುಕ್ರವಾರ) ಟ್ಟಿಟ್ಟರ್‌ನಲ್ಲಿ ಹಂಚಿಕೊಂಡು ತಮ್ಮ ಆರೋಗ್ಯ ಸ್ಥಿತಿ (Jaggesh Health Condition) ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇತ್ತೀಚೆಗೆ ಕೇದಾರ್​ನಾಥ-ಬದ್ರಿನಾಥ​ ಯಾತ್ರೆಗೆ ಜಗ್ಗೇಶ್ ತೆರಳಿದ್ದರು. ಅಲ್ಲಿ ಬೆಟ್ಟ ಹತ್ತಿ ಇಳಿದ ಕಾರಣ ಹಾಗೂ ಸತತ ಪ್ರಯಾಣ, ನಡೆದಾಟದಿಂದ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಜಗ್ಗೇಶ್ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ಸಿಟಿಸ್ಕ್ಯಾನ್​ಗೆ ಒಳಗಾಗಿದ್ದರು. ಇದನ್ನೂ ಓದಿ: ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಕಾವೇರಿಯದ್ದು: ನಟ ಉಪೇಂದ್ರತಾವು ಸಿಟಿಸ್ಕ್ಯಾನ್​ಗೆ ಒಳಗಾಗುತ್ತಿರುವ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದ ಜಗ್ಗೇಶ್, L4L5 ಕಂಪ್ರೆಷನ್ ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ. 2 ವಾರ ಫಿಸಿಯೋ ಚಿಕಿತ್ಸೆ ಹಾಗೂ ಬೆಡ್​ರೆಸ್ಟ್ ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ನಟ ಬರೆದುಕೊಂಡಿದ್ದರು. ಇದನ್ನೂ ಓದಿ: ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡುವುದು ಹೇಗೆ- ನಟ ಶ್ರೀನಾಥ್ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಜಗ್ಗೇಶ್‌ ಅವರು ಶುಕ್ರವಾರ ದೆಹಲಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಶುಕ್ರವಾರ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


