ದಾವಣಗೆರೆ: ದಾವಣಗೆರೆಯಲ್ಲಿ ಎಸಿ ಹಾಗೂ ತಹಶೀಲ್ದಾರ್ ಕೊಲೆಗೆ ಯತ್ನ ನಡೆದಿದೆ.ದಾವಣಗೆರೆ ತಾಲೂಕಿನ ಹಳೇ ಬಾತಿಯ ದರ್ಗಾ ಬಳಿ ಇರುವ ಉಮಾಪತಿ ಎಂಬವರ ದಾಸ್ತಾನು ಮಳಿಗೆ ಮೇಲೆ ಇಂದು ಅಧಿಕಾರಿಗಳು ನಡೆಸಿದ್ರು. ಈ ವೇಳೆ ಅಕ್ರಮ ಪಡಿತರ ದಾಸ್ತಾನು ವಶಕ್ಕೆ ಮುಂದಾದ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಹಾಗೂ ತಹಸೀಲ್ದಾರ್ ಸಂತೋಷ್ ಅವರ ಮೇಲೆ ಕಿಡಿಗೇಡಿಗಳು ಟೆಂಪೋ ಹತ್ತಿಸಲು ಮುಂದಾಗಿದ್ದರು. ಅಲ್ಲದೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ರು. ಇದೇ ವೇಳೆ ಅಧಿಕಾರಿಗಳ ಹಾಗೂ ದಾಸ್ತಾನು ಮಾಲೀಕರ ಜೊತೆ ಮಾತಿನ ಚಕಮಕಿಯೂ ನಡೆದಿದೆ.ಅಲ್ಲದೆ ಮಾಧ್ಯಮಗಳನ್ನು ಕಂಡು ಕಿಡಿಗೇಡಿಗಳಿಂದ ಹೊಸ ನಾಟಕವಾಡಿದ್ರು. ಅಧಿಕಾರಿಗಳು 5 ಲಕ್ಷ ಲಂಚ ಕೇಳಿದ್ರು. ನಾನು 50 ಸಾವಿರ ಕೊಡೋಕೆ ಹೋದೆ. ಮಾಧ್ಯಮದವರೇ ನೋಡಿ, ವಿಡಿಯೋ ಮಾಡ್ಕೊಳ್ಳಿ. ಅಧಿಕಾರಿಗಳು ಲಂಚ ಕೇಳ್ತಿದ್ದಾರೆ ಅಂತ ನಾಟಕವಾಡಿದ್ರು. ಘಟನೆ ಸಂಬಂಧ ಪೆÇಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಏಪ್ರಿಲ್ 2 ರಂದು ರಾತ್ರಿ ಉಡುಪಿಯಲ್ಲಿ ಉವಿಭಾಗಾಧಿಕಾರಿ ಜೊತೆ ಸೇರಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಮರಳು ಮಾಫಿಯಾ ಕಾಯಾಚರಣೆಗೆ ಹೋಗಿದ್ದಾಗ ಅವರ ಮೇಲೆ ಕೊಲೆ ಯತ್ನ ನಡೆದಿತ್ತು.ಇದನ್ನೂ ಓದಿ: ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ: ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು Sign in to your account
Username or Email Address


Password

 Remember Me


