ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಈಗ ಫುಲ್ ಫ್ರೀ ಆಗಿದ್ದಾರೆ. ಹಾಗಾಗಿ ಸಚಿವರು ಈಗ ಫೋಟೋ ಕ್ಲಿಕ್ಕಿಸಲು ತೊಡಗಿದ್ದಾರೆ.ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ಮುಗಿದ ಬಳಿಕ ಡಿಕೆಶಿ ನಿನ್ನೆಯಿಂದ ಸ್ವಲ್ಪ ಫ್ರೀ ಆಗಿದ್ದಾರೆ. ಹೀಗಾಗಿ ಅವರು ಮದುಮಲೈ ಕಡೆಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ರಸ್ತೆ ಬದಿಗಳಲ್ಲಿ ಪ್ರಾಣಿ ಪಕ್ಷಿಗಳ ದರ್ಶನವಾಗಿದೆ. ಮರಿಯಾನೆ ಜೊತೆಗೆ ಸಾಗುತ್ತಿದ್ದ ಆನೆ, ವಿಹರಿಸುತ್ತಿದ್ದ ನವಿಲು ಹಾಗೂ ಜಿಂಕೆಗಳ ಗುಂಪುಗಳನ್ನು ನೋಡಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.ಇದನ್ನು ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಚುನಾವಣಾ ಪ್ರಚಾರದ ಬಳಿಕ ಮದುಮಲೈ ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ವನ್ಯಜೀವಿಗಳೆಲ್ಲಾ ಕಾಣಿಸಿದವು. ಇದನ್ನು ನನ್ನ ಮೊಬೈಲ್ ಫೋನ್‍ನಲ್ಲಿ ಕ್ಲಿಕ್ಕಿಸಿದ್ದೇನೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.After a hectic Election campaign in Gundlupet, was on the road to Mudumalai & captured these wild life pictures on my phone! pic.twitter.com/Sda30xsnzz— DK Shivakumar INC (@withDKS) April 7, 2017Sign in to your account
Username or Email Address


Password

 Remember Me


