ಚಿಕ್ಕಬಳ್ಳಾಪುರ: ರಾಮಮಂದಿರ ವಿವಾದ ಹಿಂದೂ ಮುಸ್ಲಿಮರ ಮಧ್ಯೆ ಒಂದಷ್ಟು ಬಿರುಕು ಮೂಡಿಸಿರೋದು ನಿಜ. ಆದ್ರೆ ಇಂತಹ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಬಾಂಧವರು ಕೂಡಿ ವಿಶೇಷವಾಗಿ ಶ್ರೀರಾಮನವಮಿ ಆಚರಣೆ ಮಾಡಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಜಾದ್ ಚೌಕ್ ನಲ್ಲಿ ಇಂದು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಜೊತೆಗೂಡಿ ಭಾವೈಕ್ಯತೆಯ ಶ್ರೀರಾಮನವಮಿ ಹಬ್ಬ ಆಚರಣೆ ಮಾಡಿದ್ದಾರೆ. ಅಜಾದ್ ಚೌಕ್ ನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಪುನಸ್ಕಾರ ಸಲ್ಲಸಿ ಹಬ್ಬ ಆಚರಣೆ ಮಾಡಲಾಗಿದೆ.ಹಬ್ಬದ ಪ್ರಯುಕ್ತ ಬಂದ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಹೆಸರು ಬೇಳೆ, ಕೆಡಲೆ ಕಾಳು ಪ್ರಸಾದ ವಿತರಣೆ ಮಾಡಲಾಗಿದೆ. ಹಿಂದೂ-ಮುಸ್ಲಿಂ ಬಾಂಧವರು ಕೂಡಿ ಮಾಡಿದ ಶ್ರೀರಾಮನವಮಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.Sign in to your account
Username or Email Address


Password

 Remember Me


