ಹಾವೇರಿ: ಭೀಕರ ಬರಗಾಲದಿಂದ ರಾಜ್ಯದ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಆದ್ರೆ ಹಾವೇರಿಯ ರೈತರೊಬ್ಬರು ಜಮೀನಲ್ಲಿಯೇ ಹೊಂಡ ನಿರ್ಮಿಸಿ ಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸ್ತಿದ್ದಾರೆ. ನೀರಷ್ಟೇ ಅಲ್ಲ ಅವುಗಳಿಗೆ ಕಾಳು-ಕಡ್ಡಿ ಹಾಕಿ ಪೋಷಿಸುತ್ತಿದ್ದಾರೆ ಹಾವೇರಿಯ ಈ ನಮ್ಮ ಪಬ್ಲಿಕ್ ಹೀರೋ.ಹಾವೇರಿ ಜಿಲ್ಲೆ ಶಿಗ್ಗಾಂವಿಯ ರೈತ ಅಶೋಕ್ ಸಹದೇವಪ್ಪ ಕಬನೂರು, ಜಮೀನಿನಲ್ಲಿ ಸಣ್ಣದೊಂದು ಹೊಂಡ ಮಾಡಿ ಟ್ರ್ಯಾಕ್ಟರ್ ಮೂಲಕ ನೀರು ತಂದು ತುಂಬಿಸುತ್ತಾರೆ. ಕಾಡು ಪ್ರಾಣಿ, ಪಕ್ಷಿಗಳಿಗಷ್ಟೇ ಅಲ್ಲ ನಾಡಿನ ಪ್ರಾಣಿಗಳೂ ಇಲ್ಲಿಗೆ ಬಂದು ಈ ಬರಗಾಲದಲ್ಲಿ ನೀರಿನ ದಾಹವನ್ನೂ ನೀಗಿಸಿಕೊಳ್ಳುತ್ತಿವೆ.ಅಶೋಕ್ ಕಳೆದ 2 ತಿಂಗಳಿನಿಂದ ಹೀಗೆ ಕಾಡು ಪ್ರಾಣಿಗಳು, ಪಕ್ಷಿಗಳು ಹಾಗೂ ಜಾನುವಾರುಗಳು ಪಾಲಿನ ಭಗೀರಥ ಆಗಿದ್ದಾರೆ. ಜಿಂಕೆ, ನವಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಈ ಹುಣಸೆ ಮರದ ಬಳಿ ಬಂದು ಅಶೋಕ್ ಅವರು ಹಾಕಿದ ಅಕ್ಕಿ, ನವಣೆ, ಜೋಳ ಸೇರಿದಂತೆ ಕಾಳು-ಕಡ್ಡಿ ತಿಂದು ನೀರು ಕುಡಿದು ನೆಮ್ಮದಿಯಿಂದ ಹಾರುತ್ತವೆ.ಅಶೋಕ್ ಅವರ ಈ ಸೇವೆಗೆ ಕುರಿಗಾಯಿಗಳು ಸಂತಸ ಪಡುತ್ತಾರೆ. ಕಾಡು ಪ್ರಾಣಿಗಳು ನೀರಿಗಾಗಿ ನಾಡಿಗೆ ನುಗ್ಗಿ ನಾಯಿಗಳ ದಾಳಿಗೆ ಬಲಿಯಾಗೋದನ್ನ ನಾವು ನೋಡಿದ್ದೇವೆ. ಆದರೆ ಅಶೋಕ್ ಅವರಂಥ ಸೇವಕರಿದ್ರೆ ಕಾಡುಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ.Sign in to your account
Username or Email Address


Password

 Remember Me


