ಚಿಕ್ಕಬಳ್ಳಾಪುರ: ಬದುಕಿನ ಬಂಡಿ ಸಾಗಿಸಲು ಕೆಲಸ ಅರಸಿ ಬಂದ ಕೂಲಿಕಾರ ಮಹಿಳೆಯೊರ್ವಳು ಚಲಿಸುತ್ತಿದ್ದ ಬೊಲೆರೋ ಟೆಂಪೋದಿಂದ ಉರುಳಿಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕು ಸಬ್ಬೇನಹಳ್ಳಿ ಬಳಿ ನಡೆದಿದೆ.ಅಡ್ಡಗಲ್ ಗ್ರಾಮದ 35 ವರ್ಷದ ಗಾಯತ್ರಿ ಮೃತ ಮಹಿಳೆ. ದ್ರಾಕ್ಷಿ ಕಟಾವಿಗೆ ಬಂದಿದ್ದ ಗಾಯತ್ರಿ ಸೇರಿ 6 ಮಂದಿ ಮಹಿಳೆಯರು ಬೊಲೆರೋ ವಾಹನದ ಹಿಂಬದಿ ಕುಳಿತಿದ್ದರು. ಆದ್ರೆ ಸಬ್ಬೇನಹಳ್ಳಿ ಗ್ರಾಮದ ಬಳಿ ರಸ್ತೆ ಮಧ್ಯದ ಉಬ್ಬಿನ ಮೇಲೆ ಚಾಲಕನ ಅಜಾಗೂರಕತೆಯಿಂದ ಬೊಲೆರೋ ವಾಹನ ಜಿಗಿದು ಬಿದ್ದಿದ್ದು, ಈ ವೇಳೆ ಹಿಂಬದಿ ಕೂತಿದ್ದ ಗಾಯತ್ರಿ ಬೊಲೆರೋದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


