ಮಂಡ್ಯ: ನಾನು ಸತ್ತ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮುಖ ನೋಡಲು ಬರಬೇಕು ಎಂದು ಪತ್ರ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಬಿ.ಹೊಸೂರು ಗ್ರಾಮದಲ್ಲಿ ನಡೆದಿದೆ.ಸಾಲಬಾಧೆಯಿಂದ ಬೇಸತ್ತಿದ್ದ ರೈತ ಶಿವಣ್ಣ ಇಂದು ತಮ್ಮ ಜಮೀನಿನ ಬಳಿ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್‍ನೋಟ್ ಬರೆದಿಟ್ಟಿರುವ ಶಿವಣ್ಣ, ಹೆಎಚ್‍ಡಿ. ದೇವೇಗೌಡರಿಗೆ ತಮ್ಮ ಕೊನೆಯ ನಮಸ್ಕಾರ ತಿಳಿಸಿದ್ದಾರೆ. ತನ್ನ ಸಾವಾದ ಮೇಲೆ ಕೊನೆ ದರ್ಶನ ಪಡೆಯಲು ಕುಮಾರಸ್ವಾಮಿ ಅವರು ಬರಬೇಕು. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.ಇನ್ನು ರೈತ ಶಿವಣ್ಣರಿಗೆ ಸುಮಾರು ಆರು ಎಕರೆ ಜಮೀನಿದ್ದು ಕಬ್ಬು, ರಾಗಿ, ಭತ್ತ ಬೆಳೆಯುತ್ತಿದ್ರು. ಭೀಕರ ಬರಗಾಲದಿಂದಾಗಿ ಸುಮಾರು ಐದು ಲಕ್ಷ ರೋಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ರು. ಇದ್ರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


