ಮೈಸೂರು: ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ. ಅಧಿಕಾರ ಸಿಗಲಿಲ್ಲ ಅಂತ ಜೆಡಿಎಸ್ ಪಕ್ಷಕ್ಕೆ ತಲಾಕ್ ನೀಡಿದ್ರು ಅಂತಾ ವಿಪಕ್ಷ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಮನಸ್ಸಲ್ಲಿ ಬಿಜೆಪಿ ಸೋಲ್ಬೇಕು ಎಂಬ ಆಸೆ ಇದೆ ಎಂದು ಹೇಳಿದ್ದ ಸಿಎಂ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ರು. ನನ್ನ ಹುಟ್ಟು ಬಿಜೆಪಿಯಲ್ಲೇ. ಒಂದು ವೇಳೆ ನಾನು ಸತ್ರೂ ಅದು ಬಿಜೆಪಿಯಲ್ಲೇ. ನಾನು ತಾಯಿ ಮೊಲೆ ಹಾಲು ಕುಡಿದ ಮಗ. ಅವಳಿಗೆ ವಿಷ ಉಣಿಸೋ ಕೆಲಸ ಮಾಡಲ್ಲ ಅಂದ್ರು.ನನ್ನ ಪಕ್ಷ ನಿಷ್ಠೆ ಬಗ್ಗೆ ಟೀಕೆ ಮಾಡ್ಬೇಡಿ. ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡಿದ್ರೆ ನನ್ನ ತಾಯಿಯ ಬಗ್ಗೆ ಮಾತನಾಡಿದಷ್ಟು ಕೋಪ ಬರುತ್ತೆ ಅಂತ ಸಿಎಂ ವಿರುದ್ಧ ಈಶ್ವರಪ್ಪ ಗುಡುಗಿದ್ರು. ಸಿದ್ದರಾಮಯ್ಯ ನಿಮಗೆ ಪಕ್ಷ ನಿಷ್ಠೆ ಎಂದರೆ ಏನು ಅಂತ ಗೊತ್ತಿಲ್ಲ. ಅದಕ್ಕೆ ಬೇರೆಯವರ ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತೀರಿ. ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ. ಅಧಿಕಾರ ಸಿಗಲಿಲ್ಲ ಅಂತ ಜೆಡಿಎಸ್ ಪಕ್ಷಕ್ಕೆ ತಲಾಕ್ ನೀಡಿದ್ರು ಅಂತ ವ್ಯಂಗ್ಯವಾಡಿದ್ರು.ಗುಂಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರದಂದು ಚಿಕ್ಕಟ್ಟಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪನಿಗೆ ಮೆದುಳಿಲ್ಲ. ಅವನಿಗೂ ಮನಸ್ಸಿನಲ್ಲಿರುವುದು ಬಿಜೆಪಿ ಸೋಲಲಿ ಅಂತ. ಯಾಕಂದ್ರೆ ಯಡಿಯೂರಪ್ಪಗೂ ಅವನಿಗೂ ಅಗಿ ಬರಲ್ಲ. ಯಡಿಯೂರಪ್ಪ, ಈಶ್ವರಪ್ಪರಿಂದಲೇ ಸುಳ್ಳು ಹುಟ್ಟಿತು ಅಂತ ಈಶ್ವರಪ್ಪ ವಿರುದ್ಧ ಏಕವಚನ ಪ್ರಯೋಗಿಸಿ ಲೇವಡಿ ಮಾಡಿದ್ದರು.Sign in to your account
Username or Email Address


Password

 Remember Me


