ಚಾಮರಾಜನಗರ: ಈಶ್ವರಪ್ಪನಿಗೆ ಮೆದುಳಿಲ್ಲ. ಅವನಿಗೂ ಮನಸ್ಸಿನಲ್ಲಿರುವುದು ಬಿಜೆಪಿ ಸೋಲಲಿ ಅಂತ ಎಂದು ಪರಿಷತ್ ಪ್ರತಿಪಕ್ಷ ನಾಯಕ, ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ಏಕವಚನ ಪ್ರಯೋಗಿಸಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.ಗುಂಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಚಿಕ್ಕಟ್ಟಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಿಎಂ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ಈಶ್ವರಪ್ಪನಿಗೆ ಮೆದುಳಿಲ್ಲ. ಅವನಿಗೂ ಮನಸ್ಸಿನಲ್ಲಿರುವುದು ಬಿಜೆಪಿ ಸೋಲಲಿ ಅಂತ. ಯಾಕಂದ್ರೆ ಯಡಿಯೂರಪ್ಪಗೂ ಅವನಿಗೂ ಅಗಿ ಬರಲ್ಲ ಯಡಿಯೂರಪ್ಪ, ಈಶ್ವರಪ್ಪರಿಂದಲೇ ಸುಳ್ಳು ಹುಟ್ಟಿತು ಅಂದ್ರು.ಗೀತಾ ಮಹದೇವ ಪ್ರಸಾದ್ ಅವರನ್ನ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದವರು ನಾವು. ಆ ದುಖಃದಲ್ಲೂ ಗೀತಾ ಮಹದೇವ ಪ್ರಸಾದ್ ಚುನಾವಣಾ ಪ್ರಚಾರ ಮಾಡ್ತಿದ್ದಾರೆ ಅಂದ್ರು.Sign in to your account
Username or Email Address


Password

 Remember Me


