ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಸತತ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.ಶಿವಕುಮಾರ್ ಬಾಳೇಕುಂದ್ರಿ (22) ಸತತ ಎರಡು ವರ್ಷದಿಂದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಯುವಕ. ಅಪ್ರಾಪ್ತೆಯ ಪಕ್ಕದ ಮನೆಯವನೇ ಅಗಿದ್ದ ಶಿವಕುಮಾರ್ ಬಾಲಕಿ ಜೊತೆ ಆತ್ಮೀಯವಾದ ಒಡನಾಟ, ಸ್ನೇಹ ಬೆಳಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಯ ವಿಡಿಯೋ, ಫೋಟೋ ತೆಗೆದು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ತಾನು ನಡೆಸಿದ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ವಿಡಿಯೋವನ್ನು ಬಾಲಕಿಯ ಶಾಲೆಗೆ ಮತ್ತು ಮನೆಗೆ ಕಳುಹಿಸಿದ್ದಾನೆ.7ನೇ ತರಗತಿ ವಿದ್ಯಾರ್ಥಿನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಬಾಲಕಿ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಕಾಮುಕ ಬಿಸಿ ಚಮಚದಿಂದ ಬರೆ ಹಾಕಿತ್ತಿದ್ದ ಎಂದು ತಿಳಿದು ಬಂದಿದೆ.ಅಪ್ರಾಪ್ತ ಬಾಲಕಿ ಆರೋಪಿ ಶಿವಕುಮಾರ ಬಾಳೆಕುಂದ್ರಿ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ, ಮಾನಸಿಕ ಕಿರುಕುಳ ನೀಡಿತಿದ್ದನು ಅಂತ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾಳೆ.ಪೊಲೀಸರು ಶಿವಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂದಿಸಿದ್ದಾರೆ. ಪೊಲೀಸರು ಶಿವಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಮತ್ತು ಐಪಿಸಿ ಕಲಂ 323, 506,448, 376(2) ಅನ್ವಯ ಪ್ರಕರಣವನ್ನ ದಾಖಲಿಸಿದ್ದಾರೆ. ಇನ್ನು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. Sign in to your account
Username or Email Address


Password

 Remember Me


