ಬಳ್ಳಾರಿ: ಮಾನಸಿಕ ಅಸ್ವಸ್ಥನೊಬ್ಬ ಕಂಪೌಂಡ್ ಜಿಗಿಯಲು ಹೋಗಿ ಗೋಡೆಯ ಕಬ್ಬಿಣದ ಸರಳುಗಳಿಗೆ ತಲೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ.ಬಳ್ಳಾರಿಯ ಎಸ್‍ಬಿಐ ಬ್ಯಾಂಕ್‍ನ ಮುಂಭಾಗದ ಕಾಂಪೌಂಡ್ ಜಿಗಿಯಲು ಹೋದಾಗ ಸರಳುಗಳ ಮಧ್ಯೆ ತಲೆ ಸಿಲುಕಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥ ತನ್ನ ಹುಚ್ಚಾಟದಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಸಾವನ್ನಪ್ಪಿದ ಯುವಕನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.ಸ್ಥಳಕ್ಕೆ ಬ್ರೂಸ್ ಪೇಟೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಶವವನ್ನು ಪಂಚನಾಮೆಗೆ ಕಳುಹಿಸಿದ್ದಾರೆ. ಈ ಕುರಿತು ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


