ಬೆಳಗಾವಿ: ನೀನು ನಾಯಿಗಿಂತ ಕಡೆ ಅದರ ಜೊತೆಯಲ್ಲೆ ಮಲಗು ಎಂದು ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಪತ್ನಿಗೆ ಪತಿರಾಯನೊಬ್ಬ ಚಿತ್ರಹಿಂಸೆ ಕೊಡುತ್ತಿದ್ದ ಪ್ರಕರಣ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಂಜೀವ ಭಾಗೋಜಿ ಕಳೆದ ಆರು ತಿಂಗಳಿನಿಂದ ತನ್ನ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನು. ಪ್ರತಿದಿನ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ತೋರಿಸಿ ಅನೈಸರ್ಗಿಕವಾಗಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಭಾನುವಾರ ತನ್ನ ಪತ್ನಿಗೆ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ. ಪತಿಯ ವಿಕೃತಿಯನ್ನು ನಿರಾಕರಿಸಿದಕ್ಕೆ ಪತ್ನಿ ಮತ್ತು ತನ್ನ ಎರಡು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾನೆ.ಸಂಜೀವ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಿದ್ದ ಸಂಜೀವ 6 ತಿಂಗಳಿನಿಂದ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದನು. ತನ್ನ ಪತಿ ವಿಕೃತಿಯನ್ನು ಸಹಿಸಲಾರದ ಪತ್ನಿ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಸದ್ಯ ಪೊಲೀಸರು ಸಂಜೀವನ ವಿರುದ್ಧ ಕಲಂ 498 (ಎ), 504, 506, 377 ಅನ್ವಯ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಸಂತ್ರಸ್ತ ಮಹಿಳೆಗೆ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. Sign in to your account
Username or Email Address


Password

 Remember Me


