ತುಮಕೂರು: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ.ಮೃತ ಬೈಕ್ ಸವಾರರನ್ನು ಅರುಣ್ (24) ಮತ್ತು ವಿನಯ್ ಪ್ರಸಾದ್ (25) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರು ಮೂಲದವರಾಗಿದ್ದಾರೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಅಪಘಾತವಾದ ರಭಸಕ್ಕೆ ಬೈಕ್ ಲಾರಿ ಕೆಳಗೆ ನುಗ್ಗಿದೆ. ಪರಿಣಾಮ ಲಾರಿಗೆ ಬೆಂಕಿ ತಗುಲಿದ್ದು, ಲಾರಿ ಭಾಗಶಃ ಸುಟ್ಟು ಕರಕಲಾಗಿದೆ.ಘಟನೆ ಬಗ್ಗೆ ಕೆಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


