ಕೋಲಾರ: ಈ ಹುಡುಗ ಅನ್ನ ತಿನ್ನಲ್ಲ, ನೀರು ಕುಡಿಯಲ್ಲ, ಕಳೆದ 16 ವರ್ಷಗಳಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ ಬಾಲಕನಿಗೆ ಕೇವಲ ಹಾಲಷ್ಟೆ ಆಹಾರ. ಬರಿ ಹಾಲು ಕುಡಿದೇ ಜೀವನ ಸವೆಸುತ್ತಿರುವ ಬಾಲಕನಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಆಸರೆಯಾಗಿದೆ. ಬೆಳಕಿನ ನೆರವಿನಿಂದ ಬಾಲಕನಿಗೆ ಹಾಲು, ಆತನನ್ನ ಪೋಷಣೆ ಮಾಡಲು ಕುಟುಂಬಕ್ಕೆ ನೆರವು ಸಿಕ್ಕಿದೆ.ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದ ಗೋವಿಂದಪ್ಪ ದಂಪತಿಯ ಎರಡನೆ ಮಗ ಸಂತೋಷ್ ಹುಟ್ಟಿದಾಗಿನಿಂದಲೂ ಅನ್ನವನ್ನು ಸೇವಿಸಲ್ಲ. ಈತ ಇದುವರೆಗೂ ಹಾಲನ್ನು ಕುಡಿದು ಬದುಕಿದ್ದಾನೆ. ಸಂತೋಷ್ ಪೋಷಕರು ಬೇರೆ ಆಹಾರ ತಿನ್ನಿಸಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಈತನ ಬಾಯಿಗೆ ತಿಂಡಿ ಅಥವಾ ಇನ್ನೇನಾದ್ರು ತಿನ್ನಿಸೋದಿಕ್ಕೆ ಬಂದ್ರೂ ಉಗಿದುಬಿಡ್ತಾನೆ. ಹಾಲು ತುಂಬಿದ ಬಾಟಲ್ ಮಾತ್ರ ಈತನಿಗೆ ಗೊತ್ತಿರೋದು. ಹೀಗಿರುವಾಗ ಈತನ ಪೋಷಕರು ಪಬ್ಲಿಕ್ ಟಿವಿಯನ್ನ ಸಂಪರ್ಕಿಸಿ ಪ್ರತಿ ನಿತ್ಯ ಹಾಲು ಕೊಡಿಸುವಂತೆ ಮನವಿ ಮಾಡಿದ್ರು.ಸಂತೋಷ್ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಬಂದು ಶಾಕ್ ಆದ ಕಾರಣ ಒಂದು ಕೈ, ಮೆದಳು ಸ್ವಾಧೀನ ಕಳೆದುಕೊಂಡಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ತೋರಿಸಲಾಗಿದೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮೆದುಳಿಗೆ ಶಾಕ್ ಆಗಿರೋ ಕಾರಣ ಜೀವನಪರ್ಯಂತ ಇದು ಸರಿಹೋಗಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ.ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಮಾಡಲಾದ ಮನವಿಯಂತೆ ಈಗ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಈ ಕುಟುಂಬಕ್ಕೆ ಪ್ರತಿನಿತ್ಯ ಹಾಲು ನೀಡುತ್ತಿದೆ. ಜೊತೆಗೆ ಕುಟುಂಬ ಪೋಷಣೆಗೆ ಒಂದು ಉದ್ಯೋಗಕ್ಕೆ ಕೂಡ ಬೆಳಕು ಆಸರೆಯಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವವರಾಗಿರೋದ್ರಿಂದ ಕಷ್ಟಕರವಾದ ಜೀವನದಲ್ಲಿ ಮಗನಿಗೆ ದಿನಕ್ಕೆ ಅಲ್ಪಸ್ವಲ್ಪ ಹಾಲಿನ ಜೊತೆಗೆ, ಕೋಲಾರ ನೂತನ ವಿಧಾನ ಸೌಧ ಬಳಿ ಜೆರಾಕ್ಸ್ ಅಂಗಡಿ ಹಾಕಿ ಕೊಳ್ಳಲು ಅನುಮತಿ ಸಿಕ್ಕಿದೆ. ಅದರಂತೆ ಈಗ ಹಾಲಿನ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕಿನ ಆಸರೆ ಸಿಕ್ಕಿದೆ. Sign in to your account
Username or Email Address


Password

 Remember Me


