ಹುಬ್ಬಳ್ಳಿ: ಹಸುವೊಂದು ಕಾಲುಗಳೇ ಇಲ್ಲದ ಕರುವಿಗೆ ಜನ್ಮ ನೀಡುವ ಮೂಲಕ ನೋಡುಗರಲ್ಲಿ ಅಚ್ಚರಿ ಮಾಡಿಸಿದೆ.ಹುಬ್ಬಳ್ಳಿ ತಾಲೂಕಿನ ಹಳಿಯಾಳ ಗ್ರಾಮದ ಸೋಮಲಿಂಗಪ್ಪ ಹೂಗಾರ ಎಂಬವರ ಹಸು ಕಾಲುಗಳಿಲ್ಲದ ಕರುವಿಗೆ ಜನ್ಮ ನೀಡಿದೆ. ಇದನ್ನು ನೋಡಿ ಸೋಮಲಿಂಗಪ್ಪ ಅವರಿಗೆ ಅಚ್ಚರಿಯಾಗಿದೆ. ಕರುವಿಗೆ ಕಾಲುಗಳಿಲ್ಲವಾದ್ದರಿಂದ ಇದು ಬದುಕುವುದು ಕಷ್ಟ ಎಂದು ಭಾವಿಸಿದ್ದರು. ಆದರೆ ಕರು ಮಾತ್ರ ಎರಡು ದಿನಗಳಿಂದ ಆರೋಗ್ಯವಾಗಿದೆ. ಕರುವಿನ ಎಲ್ಲಾ ಅಂಗಾಂಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿವೆ.ಕರುವಿಗೆ ಕಾಲುಗಳು ಇಲ್ಲದಿರುವ ಕಾರಣ ಹಾಲುಣಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ಸೋಮಲಿಂಗಪ್ಪ ಹೇಳುತ್ತಾರೆ. ಕರುವಿಗೆ ಅಂಗವೈಕಲ್ಯ ಬಿಟ್ಟರೆ ಮತ್ತೇನೂ ಬದಲಾವಣೆ ಇಲ್ಲ ಎನ್ನಲಾಗಿದೆ. ಕರುವನ್ನು ನೋಡಲು ಹಳಿಯಾಳ ಗ್ರಾಮದ ಸುತ್ತಲಿನ ಜನರು ಸೊಮಲಿಂಗಪ್ಪ ಅವರ ಮನೆಗೆ ಬರುತ್ತಿದ್ದಾರೆ.Sign in to your account
Username or Email Address


Password

 Remember Me


