ಮಂಗಳೂರು: ಬೆಕ್ಕು ಕಚ್ಚಿ ರೇಬಿಸ್‍ಗೆ ತುತ್ತಾಗಿ ಉಪನ್ಯಾಸಕಿಯೊಬ್ಬರು ಮೃತಪಟ್ಟಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದಲ್ಲಿ ನಡೆದಿದೆ.ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಸಂಬಂಧಿ 56 ವರ್ಷದ ಪುಷ್ಪಾವತಿ ರೇಬಿಸ್‍ನಿಂದಾಗಿ ಮೃತಪಟ್ಟ ಮಹಿಳೆ. ಪುಷ್ಪಾವತಿ ಅವರಿಗೆ ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಬೆಕ್ಕು ಕಚ್ಚಿತ್ತು. ಈ ಬಗ್ಗೆ ಆರಂಭದಲ್ಲಿ ಪುಷ್ಪಾವತಿ ನಿರ್ಲಕ್ಷ್ಯ ವಹಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಬೆನ್ನು ನೋವಿಗೆ ಒಳಗಾಗಿ ಆಸ್ಪತ್ರೆ ಸೇರಿದ ಪುಷ್ಪಾವತಿ ಅವರಲ್ಲಿ ರೇಬಿಸ್ ಲಕ್ಷಣಗಳು ಪತ್ತೆಯಾಗಿತ್ತು ಮತ್ತು ವರ್ತನೆಯಲ್ಲೂ ಅಸಹಜತೆ ಕಾಣಿಸಿಕೊಂಡಿತ್ತು.ತಕ್ಷಣ ಮನೆಯವರು ಪುಷ್ಪಾವತಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಮತ್ತು ಅಪೋಲೊ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಿಸದೆ ಪುಷ್ಪಾವತಿ ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಉಪ್ಪಿನಂಗಡಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪುಷ್ಪಾವತಿ ಅಪಾರ ಶಿಷ್ಯ ವರ್ಗವನ್ನೂ ಹೊಂದಿದ್ದರು. Sign in to your account
Username or Email Address


Password

 Remember Me


