ಮಂಡ್ಯ: ಪ್ರೀತಿ ನಿರಾಕರಿಸಿದಕ್ಕೆ ಅಪ್ರಾಪ್ತೆಯನ್ನ ಅಪ್ರಾಪ್ತ ಬಾಲಕನೊಬ್ಬ ಶಾಲೆಯ 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಅಘಾತಕಾರಿ ಘಟನೆ ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕೊಮ್ಮೇರಹಳ್ಳಿಯ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನದೇ ಶಾಲೆಯ 7 ನೇ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಮಾರ್ಚ್ 16 ರಂದು ಫೀಸ್ ಕಟ್ಟಲು ಬಾಲಕಿ ಶಾಲೆಗ ಹೋದಾಗ ಹಿಂದಿನಿಂದ ಸ್ನೇಹಿತೆಯಂತೆ ಬಂದ ಅಪ್ರಾಪ್ತ, ಬಾಲಕಿಯ ಕಣ್ಣು ಮುಚ್ಚಿ ಶಾಲೆಯ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಅನುಮಾನಗೊಂಡ ಬಾಲಕಿ, ಅವನ ಕೈ ಬಿಡಿಸಿಕೊಂಡು ನೋಡಿದಾಗ ಗಾಬರಿಯಾಗಿದ್ದಾಳೆ.ಮಹಡಿಯ ಮೇಲೂ ಸಹ ಬಾಲಕ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ. ಇದಕ್ಕೆ ನಿರಾಕರಿಸಿ ಶಿಕ್ಷಕಿಯೊಬ್ಬರನ್ನು ಬಾಲಕಿ ಕೂಗಿದ್ದಾಳೆ. ಇದರಿಂದ ಹೆದರಿದ ಬಾಲಕ ವಿದ್ಯಾರ್ಥಿಯನ್ನು ಶಾಲೆಯ ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಗಾಯಗೊಂಡ ಬಾಲಕಿ ಸದ್ಯ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಇನ್ನು ಬಾಲಕ ನಾಪತ್ತೆಯಾಗಿದ್ದು, ಅತನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.ವಿದ್ಯಾರ್ಥಿನಿ ಶಾಲೆಯ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬದಲಾಗಿ ಶಿಕ್ಷಕರು ವಿದ್ಯಾರ್ಥಿನಿಗೆ ಮನೆಯಲ್ಲಿ ಪೋಷಕರಿಗೆ ತಿಳಿಸದಂತೆ ಹೇಳಿದ್ದರು. ಬಾಲಕ ಕಿರುಕುಳ ನೀಡುತ್ತಿರುವ ವಿಷಯ ತಿಳಿದಿದ್ದರೂ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಹಾಗು ಆಕೆಯ ತಾಯಿ ಹೇಳಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


