ಕಾರವಾರ: ಗಂಡನ ಚಿತ್ರಹಿಂಸೆಯಿಂದ ನೊಂದು ಇಂದು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಮಹಿಳೆಯನ್ನು ಸ್ಥಳೀಯರ ರಕ್ಷಣೆ ಮಾಡಿದ್ದಾರೆ.ನಗರದ ಮಾಜಾಳಿಯ ಬಾವಳಾದ ನಿವಾಸಿ ಸರಿತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕಾರವಾರ ನಗರದ ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.ಗುರುವಾರ ಸರಿತಾ ಪತಿ ಏಕನಾಥ್ ಕೋಬ್ರೇಕರ್ ತನ್ನ ಪತ್ನಿಯ ಮೇಲೆ ಮನಸ್ಸೋ ಇಚ್ಚೇ ಥಳಿಸಿದ್ದಾನೆ. ಇಷ್ಟೇ ಅಲ್ಲದೇ ಸಿಗೆರೇಟ್‍ನಿಂದ ಕೈಯನ್ನು ಸುಟ್ಟು ಮನೆಯಿಂದ ಹೊರಹಾಕಿದ್ದಾನೆ. ಇದರಿಂದ ಸರಿತಾ ಅವರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರ ತೀರಕ್ಕೆ ಬಂದಿದ್ದರು.ದಿವೇಕರ್ ಕಾಲೇಜು ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


