ಹುಬ್ಬಳ್ಳಿ: ಹೆಂಡತಿ ಎಂದು ತಿಳಿದು ಮಾವನ ಮೊಬೈಲ್‍ಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ಅರುಣ್ ನಾಯಕ್ ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಡಾಕ್ಟರ್ ಜೊತೆ ಮದುವೆಯಾಗಿತ್ತು. ಆದರೆ ಮದುವೆ ನಂತರ ಪತ್ನಿ ಗಂಡನ ಮನೆ ತೊರೆದು ಹುಬ್ಬಳ್ಳಿಯ ತವರು ಮನೆಗೆ ಬಂದು ನೆಲೆಸಿದ್ದರು.ಕೆಲವು ದಿನಗಳ ಹಿಂದೆ ಪತ್ನಿ ತಮ್ಮ ತಂದೆಯ ಮೊಬೈಲ್‍ನಿಂದ ಪತಿ ಅರುಣ್‍ಗೆ ಕರೆ ಮಾಡಿದ್ದರು. ಅರುಣ್ ಇದುವೇ ತನ್ನ ಪತ್ನಿ ನಂಬರ್ ಎಂದು ತಿಳಿದು ನಿರಂತರವಾಗಿ ಮೊಬೈಲ್‍ಗೆ ಅಶ್ಲೀಲ ವಿಡಿಯೋ, ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಳಿಯನ ಕಾಮಾವತಾರ ಕಂಡ ಮಾವ ಮೋಹನ್ ಹೆಗಡೆ ಅಶೋಕ್ ನಗರದ ಪೊಲೀಸ್ ಠಾಣೆ ದೂರು ನೀಡಿದ್ದರು.ಕಳೆದ ಒಂದು ವರ್ಷದ ಹಿಂದೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆಗಾಗಿ ಮಾರ್ಚ್ 19 ಅಂದರೆ ಸೋಮವಾರ ಹುಬ್ಬಳ್ಳಿ ನಗರಕ್ಕೆ ಬಂದಿದ್ದ ಅರುಣ್ ನಾಯಕ್‍ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.Sign in to your account
Username or Email Address


Password

 Remember Me


