ಹಾವೇರಿ: ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಗಜ್ಜೀಹಳ್ಳಿ ಗ್ರಾಮದ ಬಳಿ ನಡೆದಿದೆ.42 ವರ್ಷದ ರಾಮಪ್ಪ ಲಮಾಣಿ ಮೃತ ದುರ್ದೈವಿ. ರಾಮಪ್ಪ ಅವರ ಜೊತೆಯಲ್ಲಿ ಬೈಕ್‍ನಲ್ಲಿದ್ದ ಅವರ ಮಗಳು 17 ವರ್ಷದ ಶಿಲ್ಪಾ ಲಮಾಣಿಗೆ ಗಾಯಗಳಾಗಿದ್ದು, ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಪ್ಪ ಲಮಾಣಿ ಹಾನಗಲ್ ತಾಲೂಕಿನ ಬಾಳೂರು ತಾಂಡಾ ನಿವಾಸಿ ಎಂದು ತಿಳಿದು ಬಂದಿದೆ.ರಾಮಪ್ಪ ತಮ್ಮ ಮಗಳು ಶಿಲ್ಪಾಳನ್ನು ಟ್ಯೂಶನ್ ಕ್ಲಾಸ್‍ಗೆ ಬಿಡಲು ಹಾನಗಲ್ ಪಟ್ಟಣಕ್ಕೆ ಹೋಗುವ ವೇಳೆ ಅಪಘತ ಸಂಭವಿಸಿದೆ. ಸ್ಥಳಕ್ಕೆ ಹಾನಗಲ್ ಪೊಲೀಸ್ ಠಾಣೆಯ ಪಿಎಸ್‍ಐ ಟಿ.ಮಂಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


