ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಳಿಕ ಈಗ ಬಿಜೆಪಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿಯಿಂದ ಧರಣಿ ನಡೆಸುತ್ತಿರೋ ಫ್ರೀಡಂಪಾರ್ಕ್‍ಗೆ ಭೇಟಿ ನೀಡಿದ್ದಾರೆ.ಈ ವೇಳೆ 10 ಸಾವಿರ ಸಂಬಳ ನೀಡೋವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಅಂಗನವಾಡಿ ಕಾರ್ಯಕರ್ತೆಯರು ಶೆಟ್ಟರ್ ಮುಂದೆಯೂ ಆಕ್ರೋಶ ವ್ಯಕ್ತಪಡಿಸಿದ್ರು. ಸದನ ನಡೆಸೋಕೆ ಬಿಡಬೇಡಿ, ನಮ್ಮ ಸಮಸ್ಯೆ ಮೊದ್ಲು ಬಗೆಹರಿಸಿ ಅಂತ ಒತ್ತಡ ಹಾಕಿದ್ರು. ಆದ್ರೆ ಶೆಟ್ಟರ್ ಈ ಕುರಿತು ನಾವು ಕೇಂದ್ರದಿಂದ ನೆರವು ಕೊಡಿಸೋ ಪ್ರಯತ್ನ ಮಾಡ್ತೀವಿ. ನಮ್ಮ ಸರ್ಕಾರ ಬಂದ್ರೆ ನಿಮ್ಮ ಸಮಸ್ಯೆ ಬಗೆಹರಿಸ್ತೀವಿ ಅಂತ ಅಂದ್ರು.ಸದಸನದಲ್ಲೂ ಪ್ರಸ್ತಾಪ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಇಂದು ಸದನದಲ್ಲಿ ಬಿಜಿಪಿ ಪ್ರಸ್ತಾಪಿಸಿದ್ದು, ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. 10 ಸಾವಿರ ಜನ ರಸ್ತೆಯ ಮೇಲೆ ಇದ್ದಾರೆ. ಅವರ ಕಷ್ಟ ಕೇಳಬೇಕು ಅಂತಾ ಆಗ್ರಹಿಸಲಾಯಿತು. ಈ ವೇಳೆ ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ್ರು.ಇದನ್ನೂ ಓದಿ: ಅಂಗನವಾಡಿ ನೌಕರರಿಂದ ಆಹೋರಾತ್ರಿ ಧರಣಿ – ಬೀದಿಯಲ್ಲೇ ಮಕ್ಕಳ ನಿದ್ದೆಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯಇದನ್ನೂ ಓದಿ: ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನSign in to your account
Username or Email Address


Password

 Remember Me


