ಬೆಂಗಳೂರು: ಇಂದು ಕಮಲದ ಮನೆಗೆ ಕೃಷ್ಣಾಗಮನವಾಗಲಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.ಇಂದು ಸಂಜೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಎಸ್‍ಎಂಕೆ ಬಿಜೆಪಿ ಸೇರಲಿದ್ದಾರೆ. ಇದೇ ವೇಳೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್ ಉಪಸ್ಥಿತರಿರಲಿದ್ದಾರೆ.ಉಪಚುನಾಚಣೆ ಪ್ರಚಾರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಎಸ್‍ಎಂಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸ್ತಿಲ್ಲ. ಆದ್ರೆ ಎಸ್‍ಎಂಕೆ ದೆಹಲಿಯಿಂದ ವಾಪಸ್ ಆದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇನ್ನೊಂದು ಕಾರ್ಯಕ್ರಮವನ್ನು ಏರ್ಪಡಿಸಿ ಪಕ್ಷದ ಕಚೇರಿಗೆ ಬರಮಾಡಿಕೊಳ್ಳಲಿದ್ದಾರೆ. ಅಲ್ಲದೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳಲ್ಲೂ ಎಸ್‍ಎಂಕೆ ಪ್ರಚಾರ ನಡೆಸಲಿದ್ದಾರೆ.ಕಳೆದ ವಾರವೇ ಎಸ್‍ಎಂಕೆ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದ್ರೆ ಸಹೋದರಿಯ ಹಠಾತ್ ನಿಧನದಿಂದ ಸೇರ್ಪಡೆಯನ್ನ ಮುಂದೂಡಲಾಗಿತ್ತು.Sign in to your account
Username or Email Address


Password

 Remember Me


