ಬೆಂಗಳೂರು: ಮನೆ ಮಾಲೀಕನೋರ್ವ ಅಪ್ರಾಪ್ತೆ ಬಾಲಕಿಯನ್ನು ಮನೆಕೆಲಸಕ್ಕೆ ಇಟ್ಟುಕೊಂಡಿದ್ದು ಮಾತ್ರವಲ್ಲದೇ ಆಕೆಗೆ ಮನಬಂದಂತೆ ಥಳಿಸಿದ ಘಟನೆ ಇಂದು ಬೆಳಕಿಗೆ ಬಂದಿದೆ. ನಗರದ ಜೀವನ್ ಭೀಮಾನಗರದ 5 ನೇ ಕ್ರಾಸ್‍ನಲ್ಲಿರೋ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮಾತ್ರವಲ್ಲದೇ ಮಾಲೀಕ ದಂಪತಿ ತಮಿಳುನಾಡು ಮೂಲದವರೆಂದು ಹೇಳಲಾಗುತ್ತಿದೆ.ಕಾರಣವೇನು?: ಮನೆಯ ಫ್ರಿಡ್ಜ್‍ನಲ್ಲಿಟ್ಟಿದ್ದ ತಿಂಡಿ-ತಿನಿಸುಗಳನ್ನು ಕದ್ದು ತಿನ್ನುತ್ತಾಳೆಂದು ಆರೋಪಿಸಿ ಪೈಪ್ ತುಂಡಿನಲ್ಲಿ ಮಾಲೀಕ ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಬಾಲಕಿ ಥಳಿಸದಂತೆ ಪರಿಪರಿಯಾಗಿ ಬೇಡಿಕೊಂಡ್ರೂ ಮಾಲೀಕ ಆಕೆಯ ಮೇಲೆ ಕಿಂಚಿತ್ತೂ ಕರುಣೆ ತೋರದೆ ತನ್ನ ಕಾಲಿನಲ್ಲಿ ಒದ್ದು, ಥಳಿಸಿ ತನ್ನ ವಿಕೃತ ಮನಸ್ಥಿತಿಯನ್ನು ತೋರಿದ್ದಾನೆ. ಈ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ.ಘಟನೆ ಬಗ್ಗೆ ಜೆಬಿ ಪೊಲೀಸರನ್ನ ಮಾತನಾಡಿಸಿದಾಗ ಅವರು ಈ ಬಗ್ಗೆ ಮಾಹಿತಿ ಇಲ್ಲ. ಮಾತ್ರವಲ್ಲದೇ ಯಾರು ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಡಿಯೋ ನೋಡಿದ ಬಳಿಕವಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಮನೆ ಮಾಲಿಕನನ್ನು ಹುಡುಕಿ ಕ್ರಮ ಕೈಗೊಳ್ಳಬೇಕಾಗಿದೆ.Sign in to your account
Username or Email Address


Password

 Remember Me


