ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ‘ಮುಗುಳುನಗೆ’ಯಲ್ಲಿ ಹೊಸ ಲುಕ್‍ನಿಂದ ಗಮನ ಸೆಳೆಯುತ್ತಿದ್ದಾರೆ. ಫಸ್ಟ್ ಟೈಂ ಗಣೇಶ್ ವಿಭಿನ್ನ ಹೇರ್ ಸ್ಟೈಲ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ.ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು ಈ ಲುಕ್ ಅವ್ರ ಮುಂದಿನ ಚಿತ್ರ ಮುಗುಳು ನಗೆಯಲ್ಲಿ ನೋಡಬಹುದು. ಇತ್ತೀಚೆಗೆ ಸ್ಟಾರ್ ನಟರು ಪ್ರತಿಯೊಂದು ಸಿನಿಮಾಕ್ಕೂ ಹೇರ್ ಸ್ಟೈಲ್ ಬದಲಾಯಿಸೋ ಪದ್ಧತಿ ಜಾರಿಯಲ್ಲಿದೆ. ಆದ್ರೆ ಗಣೇಶ್ ಹೆಚ್ಚಾಗಿ ಹೇರ್ ಸ್ಟೈಲ್ ಮೇಲೆ ಪ್ರಯೋಗ ಮಾಡ್ತಿರಲಿಲ್ಲ. ಇದೀಗ ಫಸ್ಟ್ ಟೈಂ ಇಂಥದ್ದೊಂದು ಲುಕ್‍ನಲ್ಲಿ ಗಣೇಶ್ ಕಾಣಿಸಿಕೊಡು ಆಶ್ಚರ್ಯ ಮೂಡಿಸಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ತಮ್ಮ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದರು. ಸುದೀಪ್ ಅಭಿಮಾನಿಗಳಂತೂ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಕಿಚ್ಚ ಸುದೀಪ್ ಮೇಲಿನ ಅಭಿಮಾನವನ್ನು ಮೆರೆದಿದ್ದರು Sign in to your account
Username or Email Address


Password

 Remember Me


