ಬಾಗಲಕೋಟೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಿರೋದು ಮೋದಿ ಪ್ರಭಾವದಿಂದಲ್ಲ, ಯಾದವಿ ತಂದೆ-ಮಕ್ಕಳ ಕಲಹದಿಂದ ಗೆಲವು ಸಾಧಿಸಿದ್ದಾರೆ. ಮೋದಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿಕೆ ನೀಡಿದ್ದಾರೆ.ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ. ಎರಡು ಉಪ ಚುನಾವನೆಯಲ್ಲಿ ಮೋದಿಯವರ ಪ್ರಭಾವ ನೆಡೆಯಲ್ಲ ಅಂದ್ರು. ಎಸ್.ಎಂ ಕೃಷ್ಣರಿಗೆ ಕಾಂಗ್ರೆಸ್ ಪಕ್ಷ ಎಲ್ಲ ತರಹದ ಹುದ್ದೆಯನ್ನೂ ನೀಡಿತ್ತು. ಆದ್ರೆ ಅವರು ಬಿಜೆಪಿಗೆ ಹೊರಟಿರೋದು ಸರಿಯಲ್ಲ. ಕೃಷ್ಣಾ ಅವರಿಗೆ ಈ ವಯಸ್ಸಿನಲ್ಲಿ ಇದು ಬೇಕಿತ್ತಾ ಎಂದು ಆಂಜನೇಯ ಮಾರ್ಮಿಕವಾಗಿ ಪ್ರಶ್ನಿಸಿದರು.ಕಪ್ಪದ ಡೈರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡೈರಿಯನ್ನ ಬಿಜೆಪಿಯವರೇ ಬರೆದುಕೊಂಡಿದ್ದಾರೆ. ಗೋವಿಂದರಾಜ್ ಅವರ ಡೈರಿ ಬಿಜೆಪಿಯವರ ಬಳಿ ಹೇಗೆ ಬಂತು? ಅದು ಡೂಪ್ಲಿಕೇಟ್ ಡೈರಿ. ಸದನದಲ್ಲಿ ಬರಗಾಲದ ಬಗ್ಗೆ ಚಿಂತಿಸದ ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಅಂದ್ರು. Sign in to your account
Username or Email Address


Password

 Remember Me


