ಬೆಂಗಳೂರು: ದುಷ್ಕರ್ಮಿಗಳು ಯುವಕನೊಬ್ಬನ ನಾಲಿಗೆ ಕತ್ತರಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.ಒಡಿಸ್ಸಾ ಮೂಲದ 20 ವರ್ಷದ ಯುವಕ ಬಿಜು ನಾಯಕ್‍ನನ್ನು ದುಷ್ಕರ್ಮಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ನಾಲಿಗೆ ಕತ್ತರಿಸಿದ್ದಾರೆ. ಇದರಿಂದ ರಾತ್ರಿಯಿಡೀ ನೋವಿನಿಂದ ನರಳಾಡಿದ್ದ ಬಿಜು, ಬೆಳಗ್ಗೆ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಬಿಜು ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಕೃತ್ಯಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳುದುಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


